alex Certify ಗ್ಯಾಸ್ ಬರ್ನರ್ ಸುಲಭವಾಗಿ ಕ್ಲೀನ್ ಮಾಡಲು ಇಲ್ಲಿವೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ಯಾಸ್ ಬರ್ನರ್ ಸುಲಭವಾಗಿ ಕ್ಲೀನ್ ಮಾಡಲು ಇಲ್ಲಿವೆ ಟಿಪ್ಸ್

ಅಡುಗೆ ಮಾಡುವುದಕ್ಕಿಂತಲೂ ಅಡುಗೆ ಮನೆಯನ್ನು ಸ್ವಚ್ಛ ಮಾಡುವುದು ಹೆಂಗಳೆಯರಿಗೆ ಒಂದು ದೊಡ್ಡ ತಲೆನೋವು. ಅದರಲ್ಲೂ ಈ ಗ್ಯಾಸ್ ಬರ್ನರ್ ಮೇಲೆ ಉಕ್ಕಿ ಬಿದ್ದ ಹಾಲು, ಜಿಡ್ಡಿನಂಶವನ್ನು ಎಷ್ಟೇ ತಿಕ್ಕಿದರೂ ಹೋಗದೇ ಅಂಟಿ ಕುಳಿತುಕೊಂಡಿರುತ್ತದೆ.

ಇದನ್ನು ಕ್ಲೀನ್ ಮಾಡಲು ಸುಲಭವಾದ ವಿಧಾನ ಇಲ್ಲಿದೆ ನೋಡಿ.

* ಮೊದಲಿಗೆ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಡಿಟರ್ಜೆಂಟ್ ಪೌಡರ್ ಹಾಕಿ ನಿಮ್ಮ ಗ್ಯಾಸ್ ಬರ್ನರ್ ಅನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ 2 ಚಮಚ ಬೇಕಿಂಗ್ ಸೋಡಕ್ಕೆ ಸ್ವಲ್ಪ ನೀರು ಸೇರಿಸಿ ಅದನ್ನು ದಪ್ಪಗಿನ ಪೇಸ್ಟ್ ರೀತಿ ಮಾಡಿಕೊಂಡು ಇದನ್ನು ಗ್ಯಾಸ್ ಬರ್ನರ್ ಗೆ ಹಚ್ಚಿ. ಈ ಮಿಶ್ರಣವನ್ನು ಅರ್ಧಗಂಟೆ ಹಾಗೇಯೇ ಇಟ್ಟುಬಿಡಿ. ನಂತರ ಪಾತ್ರೆ ತೊಳೆಯುವ ಬ್ರಷ್ ನಿಂದ ತಿಕ್ಕಿದರೆ ಗ್ಯಾಸ್ ಬರ್ನರ್ ಕ್ಲೀನ್ ಆಗುತ್ತದೆ.

* ಅರ್ಧ ಕಪ್ ವಿನೆಗರ್ ಗೆ ಅರ್ಧ ಕಪ್ ನೀರನ್ನು ಸೇರಿಸಿಕೊಳ್ಳಿ. ಅದರಲ್ಲಿ ಕೊಳೆಯಾದ ಗ್ಯಾಸ್ ಬರ್ನರ್ ಅನ್ನು ಇಡೀ ರಾತ್ರಿ ನೆನೆಸಿಡಿ. ಬೆಳಿಗ್ಗೆ ಪಾತ್ರೆ ಉಜ್ಜುವ ಬ್ರೆಷ್ ನಿಂದ ತಿಕ್ಕಿ ತೊಳೆದರೆ ಕಪ್ಪು ಕಲೆಗಳೆಲ್ಲಾ ಮಾಯಾವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...