alex Certify ಚಿಟ್ಟೆ ಮತ್ತು ಪೆಂಗ್ವಿನ್ ಕ್ಯೂಟ್ ಫ್ರೆಂಡ್‌ಶಿಪ್‌: ವಿಡಿಯೋ ನೋಡಿ ಫಿದಾ ಆದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಟ್ಟೆ ಮತ್ತು ಪೆಂಗ್ವಿನ್ ಕ್ಯೂಟ್ ಫ್ರೆಂಡ್‌ಶಿಪ್‌: ವಿಡಿಯೋ ನೋಡಿ ಫಿದಾ ಆದ ನೆಟ್ಟಿಗರು

ಪ್ರಾಣಿಗಳ ಜಗತ್ತೇ ಅದ್ಭುತ. ಮನುಷ್ಯರಂತೆ ಸ್ವಾರ್ಥ ಮನೋಭಾವ ಅವುಗಳಿಗಿರುವುದಿಲ್ಲ. ಮಕ್ಕಳಂತೆ ಪರಿಶುದ್ಧವಾದ ಮನಸ್ಸು ಪ್ರಾಣಿಗಳದ್ದು. ಅಂತಹದ್ದೇ ಒಂದು ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪೆಂಗ್ವಿನ್‌ಗಳಿರೋ ಈ ವಿಡಿಯೋ ನೋಡ್ತಿದ್ರೆ ಎಂಥವರಿಗೂ ಖುಷಿ ಆಗಿ ಬಿಡುತ್ತೆ. ಮುದ್ದು ಮುದ್ದಾಗಿರೋ ಈ ಪೆಂಗ್ವಿನ್‌ಗಳು ಆಟ ಆಡೋ ಪರಿ ಹೇಗಿದೆ ನೋಡಿ. ಪುಟ್ಟ ಪುಟ್ಟ ಮಕ್ಕಳು ಆಟ ಆಡೋ ಹಾಗಿವೆ. ಈ ರೀತಿ ಗುಂಪು ಗುಂಪಾಗಿರೋ ಪೆಂಗ್ವಿನ್‌ಗಳನ್ನ ‘ವಾಡೆಲ್‘ ಅಂತ ಅನ್ನಲಾಗುತ್ತಿದೆ.

ಶಾಲೆಯಲ್ಲೇ ನಿದ್ರೆಗೆ ಜಾರಿದ ಶಿಕ್ಷಕಿ – ಗಾಳಿ ಬೀಸಿದ ವಿದ್ಯಾರ್ಥಿನಿ

ಈ ‘ವಾಡೆಲ್‘ ಪೆಂಗ್ವಿನ್‌ಗಳು ಹೇಗೆ ಕುಣಿದು ಕುಪ್ಪಳಿಸ್ತಿವೆ ನೋಡಿದ್ರಾ, ಅಸಲಿಗೆ ಅವು ಹೀಗೆ ಖುಷಿಯಿಂದ ಕುಣಿಯುತ್ತಾ ಕುಪ್ಪಳಿಸುತ್ತಿರೋದು ಒಂದು ಚಿಟ್ಟೆಗಾಗಿ. ಅಲ್ಲಿ ಒಂದು ಚಿಟ್ಟೆ ಹಾರಿ ಬಂದಿತ್ತು, ಅದು ಬಂದಿದ್ದೇ ತಡ ಪೆಂಗ್ವಿನ್‌ಗಳಿಗೆ ಖುಷಿಯೋ ಖುಷಿ. ಆ ಚಿಟ್ಟೆಯನ್ನ ಹಿಡಿಯೋ ಹುರುಪು ಪೆಂಗ್ವಿನ್‌ಗಳಿಗೆ. ಈ ರೀತಿ ಚಿಟ್ಟೆಯ ಹಿಂದೆ ಬಿದ್ದು ಓಡುತ್ತಿರುವ ವಿಡಿಯೋ ನಿಜಕ್ಕೂ ಅದ್ಭತವಾಗಿದೆ.

ಕೆಲವೇ ಕೆಲವು ಸೆಕೆಂಡ್ ಗಳ ವಿಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿ ಹೋಗಿದ್ಧಾರೆ. ಮತ್ತೆ ಮತ್ತೆ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಟ್ವಿಟರ್‌ನಲ್ಲಿ ಶೇರ್ ಆಗಿರೋ ಈ ವಿಡಿಯೋವನ್ನ ಈಗಾಗಲೇ 3.2 ಮಿಲಿಯನ್ ಜನರು ವೀಕ್ಷಿಸಿ ಲೈಕ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...