alex Certify Viral Video | ಬೀದಿ ನಾಯಿಗಳ ಜೊತೆ ಫ್ರೆಂಡ್‌ಶಿಪ್‌ ಮಾಡಿದ ಕೋತಿಮರಿ; ಮೂಕಜೀವಿಗಳ ಸ್ನೇಹಕ್ಕೆ ಮನಸೋತ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಬೀದಿ ನಾಯಿಗಳ ಜೊತೆ ಫ್ರೆಂಡ್‌ಶಿಪ್‌ ಮಾಡಿದ ಕೋತಿಮರಿ; ಮೂಕಜೀವಿಗಳ ಸ್ನೇಹಕ್ಕೆ ಮನಸೋತ ನೆಟ್ಟಿಗರು

ಸ್ನೇಹಿತ/ಸ್ನೇಹಿತೆ ಪ್ರತಿಯೊಬ್ಬರ ಜೀವನದಲ್ಲಿ ಬರುವಂತಹ ಪ್ರಮುಖ ಪಾತ್ರ. ಮನುಷ್ಯರಿಗೆ ಮಾತ್ರ ಸ್ನೇಹದ ಬೆಲೆ ಗೊತ್ತಿರುತ್ತೆ ಅಂತ ಅಂದ್ಕೊಳ್ಳೊ ಹಾಗಿಲ್ಲ. ಯಾಕೆಂದ್ರೆ ಮಾತೇ ಬರದ ಮೂಕ ಜೀವಿಗಳಾದ ಪ್ರಾಣಿಗಳಿಗೂ ಸ್ನೇಹದ ಭಾಷೆ ಗೊತ್ತಿರುತ್ತೆ. ಅದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೊ.

ಇಲ್ಲಿ ನಾಯಿಗಳೆರಡು ಕೋತಿ ಮರಿಯೊಂದಿಗೆ ನಡೆದುಕೊಳ್ತಿರೊ ರೀತಿ ಹೇಗಿದೆ ನೋಡಿದ್ರಾ..! ಅಚ್ಚರಿ ಆಗ್ಬಹುದು ಈ ಕೋತಿ ಮರಿಯೊಂದನ್ನ ಬೆನ್ನಮೇಲೆ ಕುರಿಸಿಕೊಂಡು ಈ ಎರಡು ನಾಯಿಗಳು ಆಟ ಆಡ್ತಿವೆ. ಒಂದು ನಾಯಿ ಈ ಕೋತಿಮರಿಯನ್ನ ಹೊತ್ಕೊಂಡು ಬಂದು, ಇನ್ನೊಂದು ನಾಯಿಯ ಬೆನ್ನ ಮೇಲೆ ಏರಿ ಕುಳಿತುಕೊಳ್ಳುವುದಕ್ಕೆ ಸಹಾಯ ಮಾಡುತ್ತೆ. ಅದು ಕೂಡ ಬೆನ್ನಮೇಲೆ ಏರಿಸಿಕೊಂಡು ಆ ನಂತರ ನಿಧಾನಕ್ಕೆ ಕೆಳಗೆ ಇಳಿಸುತ್ತದೆ. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೀದಿನಾಯಿ ಹಾಗೂ ಕೋತಿ ಮರಿಯ ಈ ಗೆಳೆತನ ನೋಡಿ ನೆಟ್ಟಿಗರು ಫುಲ್‌ ಫಿದಾ ಆಗ್ಹೋಗಿದ್ದಾರೆ.

ವಿದಿತ್ ಶರ್ಮಾ ಅನ್ನುವವರು ತಮ್ಮ ಟ್ಟಿಟ್ಟರ್ ಅಕೌಂಟ್‌ನಲ್ಲಿ ಈ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ. 21 ಸೆಕೆಂಡ್‌ನ ಈ ವಿಡಿಯೋ ನೋಡಿದವರೆಲ್ಲ ಬೆರಗಾಗಿದ್ದಾರೆ ಹಾಗೂ ಪ್ರಾಣಿಗಳ ನಡುವೆ ಇರುವ ಅನ್ಯೋನ್ಯತೆ ಮನುಷ್ಯರಿಗಿಲ್ಲ. ಇವುಗಳ ಬಾಂಧವ್ಯ ನೋಡಿ ಮನುಷ್ಯರು ಕಲಿಯಬೇಕಾಗಿರುವುದು ತುಂಬಾ ಇದೆ ಎಂದು ತುಂಬಾ ಜನರು ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...