alex Certify ಮನಮಿಡಿಯುತ್ತೆ ಪುಟ್ಟ ಬಾಲಕರಿಬ್ಬರ ಹೃದಯಸ್ಪರ್ಶಿ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಮಿಡಿಯುತ್ತೆ ಪುಟ್ಟ ಬಾಲಕರಿಬ್ಬರ ಹೃದಯಸ್ಪರ್ಶಿ ವಿಡಿಯೋ

ಇಬ್ಬರು ಬಾಲಕರು ಪರಸ್ಪರ ಕಾಳಜಿ ತೋರಿಕೊಂಡು ಮಾನವೀಯ ಮೌಲ್ಯಗಳನ್ನು ಮೆರೆಯುತ್ತಿರುವ ವಿಡಿಯೋವೊಂದು ನೆಟ್ಟಿಗರ ಹೃದಯ ಬೆಚ್ಚಗಾಗಿಸಿದೆ.

ʼಮುಲ್ತಾನಿ ಮಿಟ್ಟಿʼ ಪ್ಯಾಕ್ ನಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ….?

59 ಸೆಕೆಂಡ್‌ಗಳ ಈ ವಿಡಿಯೋದಲ್ಲಿ, ಪುಟ್ಟ ಬಾಲಕನೊಬ್ಬ ತನ್ನ ಕಾರಿನ ಬಳಿ ಬಂದು ನಿಂತಿದ್ದನ್ನು ನೋಡಿ ಕಾರೊಳಗಿದ್ದ ಮತ್ತೊಬ್ಬ ಬಾಲಕ, ಕಿಟಕಿ ಗಾಜು ಇಳಿಸಿ ಆತನಿಗೆ ಆಟವಾಡಲು ತನ್ನ ಬಳಿ ಇದ್ದ ಆಟಿಕೆಗಳನ್ನು ಕೊಡುತ್ತಾನೆ. ಆ ಆಟಿಕೆಗಳನ್ನು ಪಡೆದ ನಿರಾಶ್ರಿತ ಬಾಲಕ ಕೆಲ ಕ್ಷಣ ಆಟವಾಡಿ ಅವನ್ನು ಮರಳಿಸಲು ಬಂದಾಗ ಕಾರೊಳಗಿದ್ದ ಬಾಲಕ ತೆಗೆದುಕೊಳ್ಳುವುದಿಲ್ಲ.

ಪ್ರಧಾನಿ ಮೋದಿ ಕಣ್ಣೀರಿನಿಂದ ಜನರ ಜೀವ ಉಳಿಯೋದಿಲ್ಲ: ರಾಹುಲ್​ ಗಾಂಧಿ ವ್ಯಂಗ್ಯ

ಆಗ ಬೀದಿಯ ಮತ್ತೊಂದು ತುದಿಗೆ ಹೋಗುವ ನಿರಾಶ್ರಿತ ಬಾಲಕ ಕಾರೊಳಗಿದ್ದ ತನ್ನ ಈ ಹೊಸ ಸ್ನೇಹಿತನಿಗೆ ಕುರುಕಲು ತಿಂಡಿಯ ಪೊಟ್ಟಣವೊಂದನ್ನು ತಂದುಕೊಡುತ್ತಾನೆ. ಇಷ್ಟೆಲ್ಲಾ ಕೆಲವೇ ಕ್ಷಣಗಳಲ್ಲಿ ಮುಗಿದು, ಇಬ್ಬರೂ ಪರಸ್ಪರ ಟಾ-ಟಾ ಮಾಡಿಕೊಳ್ಳುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...