alex Certify ಮನಕಲಕುವಂತಿದೆ ಶ್ವಾನದ ಜೊತೆಗಿನ ಏರ್​ಪೋರ್ಟ್ ಸಿಬ್ಬಂದಿ ಬಾಂಧವ್ಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಕಲಕುವಂತಿದೆ ಶ್ವಾನದ ಜೊತೆಗಿನ ಏರ್​ಪೋರ್ಟ್ ಸಿಬ್ಬಂದಿ ಬಾಂಧವ್ಯ..!

ಮನುಷ್ಯ ಹಾಗೂ ಶ್ವಾನಗಳ ನಡುವಿನ ಬಾಂಧವ್ಯ ಎಂತಾದ್ದು ಎಂದು ಸಾರುವಂತಹ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ರೌಂಡ್ಸ್ ಹಾಕುತ್ತಿದೆ.

ಇಂಡಿಗೋದ ಸಿಬ್ಬಂದಿಯಾದ ಜೋಸೆಫ್​ ರೋಡ್ರಿಗಸ್​ ಎಂಬವರು ಬಿಳಿ ಬಣ್ಣದ ಬೀದಿ ನಾಯಿ ವೈಟಿ ಜೊತೆ ಸ್ನೇಹ ಸಂಪಾದಿಸಿದ್ದರು. ಇವರಿಬ್ಬರೂ ಅಂಧೇರಿಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗುತ್ತಿದ್ದರು.

ಆದರೆ ಒಂದು ದಿನ ವೈಟಿಯ ಮತ್ತೊಬ್ಬ ಸ್ನೇಹಿತ ಕಳೆದುಹೋಗಿದ್ದಾನೆ ಅನ್ನೋದು ರೋಡ್ರಿಗಸ್​ ಗಮನಕ್ಕೆ ಬಂದಿತು. ಸ್ನೇಹಿತನಿಲ್ಲದೇ ವೈಟಿ ಹಾಗೂ ಬ್ರೌನಿ ಎಂಬ ಹೆಸರಿನ ನಾಯಿಗಳು ಖಿನ್ನತೆಗೆ ಒಳಗಾಗಿದ್ದವು. ಅವಕ್ಕೆ ಹೇಗಾದರೂ ಸಹಾಯ ಮಾಡಬೇಕು ಎಂದು ನಿರ್ಧರಿಸಿದ ಜೋಸೆಫ್​​ ಹತ್ತಿರದ ಪ್ರಾಣಿ ಪ್ರಿಯರಿಗೆ ಮಾಹಿತಿ ನೀಡಿದ್ರು.

ಇದಾದ ಬಳಿಕ ಪ್ರಿಯಾಂಶು ಶರ್ಮಾ, ಕಲ್ಯಾಣಿ ಚೈತನ್ಯ ಹಾಗೂ ಸುಧೀಕರ್​ ಕುಡ್ಲಾಕರ್​ ಇವರ ಸಹಾಯಕ್ಕೆ ಧಾಮಿಸಿದ್ರು. ಬಾಂದ್ರಾ ಹಾಗೂ ಮಲಾಡ್​ನ ಬಿಎಂಸಿ ಪ್ರಾಣಿ ಕೇಂದ್ರದಲ್ಲಿ ಪರಿಶೀಲನೆ ಮಾಡಿ ವೇಳೆ ವೈಟಿಯ ಸ್ನೇಹಿತ ಸಿಕ್ಕಿದೆ. ಇವರೆಲ್ಲರ ಪುನರ್​ ಸಮ್ಮಿಲನ ಮನಕಲಕುವಂತಿದ್ದು ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...