alex Certify ‌ʼಕೊರೊನಾʼ ಲಸಿಕೆ ಪಡೆಯುವವರಿಗೆ ಮತ್ತೊಂದು ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಕೊರೊನಾʼ ಲಸಿಕೆ ಪಡೆಯುವವರಿಗೆ ಮತ್ತೊಂದು ಗುಡ್‌ ನ್ಯೂಸ್

HealthifyMe Launches COVID-19 Vaccination Slot Booking in India, Integrates  Under45 Team | Technology Newsಇಂಡಿಯನ್​ ಫಿಟ್​ನೆಸ್​ ಅಪ್ಲಿಕೇಶನ್​ಗಳಲ್ಲಿ ಒಂದಾಗಿರುವ ಹೆಲ್ತಿಫೈ ಮಿ ಯು ಕೊರೊನಾ ಲಸಿಕೆ ಬುಕ್ಕಿಂಗ್​ ಮಾಡುವ ಸೌಲಭ್ಯವನ್ನ ಅನಾವರಣಗೊಳಿಸಿದೆ. ಕೊವಿನ್​​​ ಜೊತೆಯಲ್ಲಿ ಈ ಕಂಪನಿಯು ಅಪ್ಲಿಕೇಶನ್​​ ಸರ್ವೀಸ್​ ಪ್ರೋವೈಡರ್​ ಆಗಿ ನೋಂದಣಿ ಮಾಡಿಕೊಂಡಿದೆ.

ಹೆಲ್ತಿಫೈ ಮಿ 10 ಭಾಷೆಗಳಲ್ಲಿ ಲಸಿಕೆ ಸೌಲಭ್ಯವನ್ನ ನೀಡುತ್ತಿದೆ. ಈಗಾಗಲೇ 8 ಮಿಲಿಯನ್​ಗೂ ಅಧಿಕ ಮಂದಿ ಈ ಅಪ್ಲಿಕೇಶನ್​ ಸಹಾಯವನ್ನ ಪಡೆದುಕೊಂಡಿದ್ದಾರೆ.

ಹೆಲ್ತಿ ಫೈ ಮಿಯಲ್ಲಿ ಲಸಿಕೆಗೆ ನೋಂದಣಿ ಮಾಡಿಕೊಳ್ಳಲು ನೀವು ಮೊದಲು ಅಪ್ಲಿಕೇಶನ್​ನ್ನು ಡೌನ್​ಲೋಡ್​ ಮಾಡಬೇಕು. ಇದಾದ ಬಳಿಕ ಅಪ್ಲಿಕೇಶನ್​ನಲ್ಲಿ ವ್ಯಾಕ್ಸಿನೇಟ್​ ಮಿ ವಿಭಾಗಕ್ಕೆ ಹೋಗಿ. ಅಲ್ಲಿ ನಿಮ್ಮ ಅಂಚೆ ಪಿನ್​ನ್ನು ನಮೂದಿಸುವ ಮೂಲಕ ಲಸಿಕಾ ಕೇಂದ್ರಗಳನ್ನ ಪತ್ತೆ ಮಾಡಬಹುದಾಗಿದೆ.

ಹೆಲ್ತಿ ಫೈ ಮಿ ಮುಂದಿನ ಮೂರು ತಿಂಗಳಿನಲ್ಲಿ 10 ಮಿಲಿಯನ್​ಗೂ ಅಧಿಕ ಸ್ಲಾಟ್​ಗಳನ್ನ ಬುಕ್​ ಮಾಡುವ ಗುರಿಯನ್ನ ಹೊಂದಿದೆ. 45 ವರ್ಷದೊಳಗಿನವರಿಗೆ ಲಸಿಕೆಯ ಸ್ಲಾಟ್​ಗಳ ಲಭ್ಯತೆಯನ್ನ ಕಂಡು ಹಿಡಿಯವ ಬಗ್ಗೆ ಫೈಂಡರ್​​ನ್ನು ಚೆನ್ನೈ ಮೂಲದ ಟೆಕ್ಕಿ ಬರ್ಟಿ ಥಾಮಸ್ ಅಭಿವೃದ್ಧಿಪಡಿಸಿದ್ದಾರೆ. ಟೆಲಿಗ್ರಾಮ್​​ನಲ್ಲಿ 672ಕ್ಕೂ ಚಾನೆಲ್​ಗಳ ಮೂಲಕ 4.1 ಮಿಲಿಯನ್​ ಚಂದಾದಾರರಿಗೆ ಲಸಿಕೆ ಬಗ್ಗೆ ಮಾಹಿತಿಯನ್ನ ನೀಡುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...