alex Certify ಮಕ್ಕಳು ಹೆಡ್‌ ಫೋನ್‌ ಬಳಸ್ತಾರಾ…? ಹಾಗಾದ್ರೆ ಈ ಸುದ್ದಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳು ಹೆಡ್‌ ಫೋನ್‌ ಬಳಸ್ತಾರಾ…? ಹಾಗಾದ್ರೆ ಈ ಸುದ್ದಿ ಓದಿ

Headphones, Earbuds Hinder Auditory System Maturation, May Raise Hearing Troubles in Children

ಹೆಡ್‌ಫೋನ್‌ಗಳು ಹಾಗೂ ಇಯರ್‌ಬಡ್‌ಗಳ ಬಳಕೆಯಿಂದ ಮಕ್ಕಳಲ್ಲಿ ಶ್ರವಣ ದೋಷ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಡಿವೈಸ್‌ನ ಪೂರ್ಣ ಆಡಿಯೋ ಕ್ಷಮತೆಯ 50%ಗಿಂತ ಹೆಚ್ಚಿನ ವಾಲ್ಯೂಮ್‌ನಲ್ಲಿ ಹೆಡ್‌ಫೋನ್‌ಗಳನ್ನು ದಿನವೊಂದಕ್ಕೆ ಒಂದು ಗಂಟೆಗಿಂತ ಹೆಚ್ಚಿನ ಅವಧಿಗೆ ಹಾಕಿಕೊಳ್ಳುವ ಮಂದಿಯಲ್ಲಿ ಶ್ರವಣ ದೋಷದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ.

ಜಾನಿ ಲಿವರ್‌ ಪುತ್ರಿ ಪ್ರತಿಭೆಗೆ ಮಾರುಹೋದ ನೆಟ್ಟಿಗರು

ಮಕ್ಕಳು ಹಾಗೂ ಟೀನೇಜರ್‌ಗಳಲ್ಲಿ 85 ಡೆಸಿಬಲ್‌ನಷ್ಟು ದನಿ ಸುರಕ್ಷಿತ ಮಟ್ಟವಾಗಿದೆ ಎಂದು ವಾಲ್ ಸ್ಟ್ರೀಟ್‌ ಜರ್ನಲ್‌ ಅಂಕಣವೊಂದರಲ್ಲಿ ಬರೆಯಲಾಗಿದ್ದು, ವಿಚಾರವನ್ನು ಅಲ್ಲಗಳೆದ ಅಮೆರಿಕ ಮೂಲದ ದಿ ಕ್ವಿಂಟ್ ಕೋಅಲಿಷನ್‌ನ ಸಂಸ್ಥೆಯ ಡೇನಿಯಲ್ ಫಿಂಕ್, “85 ಡೆಸಿಬಲ್‌ನಷ್ಟು ದನಿ ಯಾರಿಗೇ ಆದರೂ ಸುರಕ್ಷಿತವಲ್ಲ” ಎಂದಿದ್ದಾರೆ.

ಸಾಮಾನ್ಯವಾಗಿ ಕಾರ್ಖಾನೆಗಳು ಹಾಗೂ ಭಾರೀ ಉಪಕರಣಗಳೊಂದಿಗೆ ಕೆಲಸ ಮಾಡುವ ಮಂದಿಗೆ ತೊಂದರೆ ಕೊಡಲಾರದ ಮಟ್ಟದ ಶಬ್ದಗಳು ಪುಟಾಣಿ ಮಕ್ಕಳ ಕಿವಿಗೆ ಬಹಳ ತೊಂದರೆಯುಂಟು ಮಾಡಲಿವೆ ಎಂದ ಫಿಂಕ್, “ಶ್ರವಣ ವ್ಯವಸ್ಥೆ ಪೂರ್ಣವಾಗಿ ಬಲಿತಿರದ ಕಾರಣ ಮಕ್ಕಳಲ್ಲಿ ರಿಸ್ಕ್ ಹೆಚ್ಚಾಗಿರುತ್ತದೆ” ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...