alex Certify ಒಂದು ಸಂದರ್ಭದಲ್ಲಿ ಕ್ರೆಡಿಟ್​ ಕಾರ್ಡ್​ ಪಡೆಯಲು ಪರದಾಡಿದ್ದ ವ್ಯಕ್ತಿಯಿಂದ ಅಸಾಮಾನ್ಯ ಸಾಧನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಸಂದರ್ಭದಲ್ಲಿ ಕ್ರೆಡಿಟ್​ ಕಾರ್ಡ್​ ಪಡೆಯಲು ಪರದಾಡಿದ್ದ ವ್ಯಕ್ತಿಯಿಂದ ಅಸಾಮಾನ್ಯ ಸಾಧನೆ

ಕ್ರೆಡಿಟ್​ ಕಾರ್ಡ್​ ಪಡೆಯಲು ಸಾಧ್ಯವಾಗದ ರಸೆಲ್​​ ಕಮ್ಮರ್​​ ಇದೀಗ ಗೋಲ್ಡ್​ಮನ್​ ಸ್ಯಾಚ್​​ ಕಂಪನಿಯಲ್ಲಿ ಕ್ರೆಡಿಟ್​ ಟ್ರೇಡರ್​ ಆಗುವ ಮೂಲಕ ತಮ್ಮ ಛಲವನ್ನು ಸಾಧಿಸಿ ತೋರಿಸಿದ್ದಾರೆ.

ಇದು ಜಪಾನ್‌ನಲ್ಲಿ ಸಾಮಾನ್ಯ ಕಥೆಯಾಗಿದೆ, ವಿಶೇಷವಾಗಿ ಕ್ರೆಡಿಟ್ ಇತಿಹಾಸವಿಲ್ಲದ ಯುವಕರಿಗೆ. ಕಮ್ಮರ್ ಪ್ರತಿಕ್ರಿಯೆಯು ಅಸಾಮಾನ್ಯವಾಗಿತ್ತು: ಜನರಿಗೆ ಕ್ರೆಡಿಟ್​​ ಕಾರ್ಡ್‌ಗಳಿಗೆ ಪರ್ಯಾಯ ಸೇವೆಯನ್ನು ನೀಡಲು ಅವರು ವ್ಯಾಪಾರವನ್ನು ರೂಪಿಸಿದರು.

ಜಪಾನ್​​ನಲ್ಲಿ ಈ ರೀತಿಯ ಕ್ರೆಡಿಟ್​ ಕಾರ್ಡ್ ಹೊಂದಿರದ ಯುವಕರ ಕತೆ ಸಾಮಾನ್ಯ. ಆದರೆ ರಸೆಲ್​ ಕತೆ ಮಾತ್ರ ಇವೆಲ್ಲಕ್ಕಿಂತ ವಿಭಿನ್ನವಾಗಿದೆ. ಕ್ರೆಡಿಟ್​ ಕಾರ್ಡ್​ ಪಡೆಯಲು ಆಗದ ರಸೆಲ್​​ ಇದೀಗ ಬೇರೆಯವರಿಗೆ ಕ್ರೆಡಿಟ್​ ಕಾರ್ಡ್​ಗೆ ಸಮನಾದ ಸೌಕರ್ಯವನ್ನು ನೀಡಲು ಮುಂದಾಗಿದ್ದಾರೆ.

ಅಡುಗೆ ಮನೆಯಲ್ಲಿ ಇಂಥಾ ವಸ್ತುಗಳು ಬೇಡವೇ ಬೇಡ

ಈ ವಿಚಾರವಾಗಿ ಮಾತನಾಡಿದ ರಸೆಲ್​, ಜಪಾನ್​​ನಲ್ಲಿ ಮೊದಲ ಕ್ರೆಡಿಟ್​​ ಕಾರ್ಡ್​ ಪಡೆಯುವುದು ತುಂಬಾನೇ ಕಷ್ಟಕರವಾಗಿತ್ತು. ಹೀಗಾಗಿ ನಾವು ಯಾರು ಕ್ರೆಡಿಟ್​ ಕಾರ್ಡ್​ ಬಳಕೆ ಮಾಡುವುದಿಲ್ಲವೋ ಅಂತವರಿಗೆ ಕ್ರೆಡಿಟ್​ ಕಾರ್ಡ್​ಗೆ ಸಮನಾದ ವ್ಯವಸ್ಥೆಯನ್ನು ನೀಡಲು ಆರಂಭಿಸಿದೆವು ಎಂದು ಹೇಳಿದ್ದಾರೆ.

ಯೂನಿಕಾರ್ನ್​ ಬೈ ನೌ, ಪೇ ಲೇಟರ್​( ಬಿಎಲ್​ಪಿಎಲ್​) ಕೊರೊನಾ ಸಂದರ್ಭದಲ್ಲಿ ಹೆಚ್ಚಿನ ಪ್ರಚಾರವನ್ನು ಪಡೆದಿದೆ. ಶೂನ್ಯ ಬಡ್ಡಿದರದ ಈ ಸೌಲಭ್ಯವು ಯುವ ಜನಾಂಗಕ್ಕೆ ವರದಾನವಾಗಿ ಬದಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...