alex Certify 2023ರಿಂದ ಈ ರಾಶಿಯವರಿಗೆ ಶುರುವಾಗಲಿದೆ ಕಷ್ಟದ ದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2023ರಿಂದ ಈ ರಾಶಿಯವರಿಗೆ ಶುರುವಾಗಲಿದೆ ಕಷ್ಟದ ದಿನ

ಶನಿಯನ್ನು ನ್ಯಾಯ ದೇವತೆ ಎಂದು ನಂಬಲಾಗುತ್ತದೆ. ಶನಿ ಒಲಿದ್ರೆ ಬಡವ ಕೂಡ ಶ್ರೀಮಂತನಾಗಬಲ್ಲ. ಹಾಗೆ ಶನಿ ಮುನಿದ್ರೆ ಅನಾರೋಗ್ಯದಿಂದ ಹಿಡಿದು ಬಡತನದವರೆಗೆ ಎಲ್ಲ ಸಮಸ್ಯೆ ಕಾಡುತ್ತದೆ. ಸಾಡೇ ಸಾತಿ ಶನಿಯಲ್ಲಿ ಜನರು ಕೆಲ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಸಾಡೇ ಸಾತಿಯಲ್ಲಿರುವ  ಕೆಲ ರಾಶಿಯವರಿಗೆ 2023ರಲ್ಲಿ ಅತ್ಯಂತ ಕಠಿಣ ದಿನಗಳನ್ನು ಎದುರಿಸಬೇಕಾಗುತ್ತದೆ.

ಶನಿ, 2023ರ ಜನವರಿ 17ರಂದು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಮಾರ್ಚ್ 29, 2025ರವರೆಗೆ ಆತ ಅಲ್ಲಿಯೇ ಇರಲಿದ್ದಾನೆ. ಶನಿ ಮಕರ ಹಾಗೂ ಕುಂಭ ರಾಶಿಯ ಸ್ವಾಮಿ ಗ್ರಹ. ಈ ಎರಡೂ ಗ್ರಹಗಳು ಶನಿಗೆ ಪ್ರಿಯವಾದ ಗ್ರಹ ಎನ್ನಲಾಗುತ್ತದೆ. ಆದ್ರೆ 2023ರಲ್ಲಿ ಕುಂಭ ರಾಶಿಯ ಜನರಿಗೆ ಸಾಡೇ ಸಾತಿಯ ಕಷ್ಟದ ದಿನ ಶುರುವಾಗಲಿದೆ. ಈ ರಾಶಿಯ ಯಾವ ಜಾತಕದಲ್ಲಿ ಶನಿ ನೀಚ ಸ್ಥಾನದಲ್ಲಿದ್ದಾನೋ ಅವರೆಲ್ಲ ಸಂಕಷ್ಟ ಎದುರಿಸಬೇಕಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಇವರನ್ನು ಕಾಡಲಿದೆ. ಹಾಗೆಯೇ ಸಂಬಂಧಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳಲಿದೆ. ಮಾನಸಿಕ ಹಿಂಸೆ, ಕಿರಿಕಿರಿ, ಪ್ರತಿಯೊಂದು ಕೆಲಸದಲ್ಲೂ ಸಮಸ್ಯೆಯನ್ನು ಇವರು ಎದುರಿಸಲಿದ್ದಾರೆ. ಯಾವುದೇ ಪರಿಶ್ರಮಕ್ಕೆ ಫಲ ಸಿಗುವುದಿಲ್ಲ. ಎಷ್ಟೇ ಕಷ್ಟಪಟ್ಟರೂ ಯಶಸ್ಸು ಪ್ರಾಪ್ತಿಯಾಗುವುದಿಲ್ಲ. ಅನವಶ್ಯಕ ಭಯ ಇವರನ್ನು ಕಾಡಲಿದೆ. ಅಲ್ಲದೆ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಸಾಧ್ಯತೆಯಿದೆ. 2025ರವರೆಗೆ ಕಷ್ಟದ ದಿನಗಳು ಇರಲಿದ್ದು ಕುಂಭ ರಾಶಿಯವರು ಜಾಗೃತೆಯಿಂದ ಇರಬೇಕು.

ಶನಿವಾರದ ದಿನ ಅಗತ್ಯವಿರುವವರಿಗೆ ದಾನ ಮಾಡುವುದು ಒಳ್ಳೆಯದು. ಶನಿ ಚಾಲೀಸಾ ಪಠಣ ಮಾಡಬೇಕು. ಶನಿಯ ಬೀಜ ಮಂತ್ರವನ್ನು ಜಪಿಸುವುದು ಒಳ್ಳೆಯದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...