alex Certify ಅತಿಯಾಗಿ ಮೊಟ್ಟೆ ತಿಂದರೆ ಬರುತ್ತಾ ಡಯಾಬಿಟೀಸ್..? ಚೀನಿಯರ ಅಧ್ಯಯನದಲ್ಲಿ ಬಯಲಾದದ್ದೇನು..?? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿಯಾಗಿ ಮೊಟ್ಟೆ ತಿಂದರೆ ಬರುತ್ತಾ ಡಯಾಬಿಟೀಸ್..? ಚೀನಿಯರ ಅಧ್ಯಯನದಲ್ಲಿ ಬಯಲಾದದ್ದೇನು..??

ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಅನ್ನೋ ಗಾದೆ ಇದೆ. ಆದರೆ ಮೊಟ್ಟೆ ಜಾಸ್ತಿ ತಿಂದಷ್ಟು, ಡಯಾಬಿಟೀಸ್ ತಗುಲುವ ಸಾಧ್ಯತೆ ಹೆಚ್ಚು ಎಂದು ಚೀನಿಯರ ಅಧ್ಯಯನದಲ್ಲಿ ಬಯಲಾಗಿದೆ.

ಮೊಟ್ಟೆ ಇಡೀ ಪ್ರಪಂಚದ ಅಚ್ಚುಮೆಚ್ಚಿನ ಉಪಹಾರ. ಈ ಸೂಪರ್ ಫುಡ್ ನ ಗರಿಷ್ಠ ಪ್ರಯೋಜನಗಳಿಗಾಗಿ ಪ್ರತಿದಿನ ಕನಿಷ್ಠ ಒಂದರಿಂದ ಎರಡು ಮೊಟ್ಟೆಗಳನ್ನು ಸೇವಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಆದರೆ ಅಧ್ಯಯನದ ಪ್ರಕಾರ, ಹೆಚ್ಚಿನ ಮೊಟ್ಟೆ ಸೇವನೆಯು ಮಧುಮೇಹವನ್ನು ಪ್ರಚೋದಿಸುತ್ತದೆ ! ಸಂಶೋಧನೆಯ ಪ್ರಕಾರ, ದಿನಕ್ಕೆ ಒಂದು ಅಥವಾ ಹೆಚ್ಚು ಮೊಟ್ಟೆಗಳನ್ನು ಸೇವಿಸುವವರಲ್ಲಿ 60 ಪ್ರತಿಶತದಷ್ಟು ಮಧುಮೇಹಕ್ಕೆ ತುತ್ತಾಗುವ ಅಪಾಯವಿದೆ.

ಚೀನಾ ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ಕತಾರ್ ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ನಡೆಸಲ್ಪಟ್ಟ, ಅಧ್ಯಯನದಲ್ಲಿ ಈ ವಿಷಯ ಬಯಲಾಗಿದೆ‌ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಸಾರ್ವಜನಿಕ ಆರೋಗ್ಯ ತಜ್ಞ ಮಿಂಗ್ ಲಿ ಮಧುಮೇಹದ ಹೆಚ್ಚಳವಾಗ್ತಿರೋದು ಕಳವಳಕಾರಿಯಾಗಿದೆ ಎಂದರು.

ದೀರ್ಘಾವಧಿಯ ಮೊಟ್ಟೆ ಸೇವನೆಯು (ದಿನಕ್ಕೆ 38 ಗ್ರಾಂಗಿಂತ ಹೆಚ್ಚು) ಚೀನೀ ವಯಸ್ಕರಲ್ಲಿ ಮಧುಮೇಹದ ಅಪಾಯವನ್ನು ಸರಿಸುಮಾರು 25 ಪ್ರತಿಶತದಷ್ಟು ಹೆಚ್ಚಿಸಿದೆ ಎಂದು ನಾವು ಕಂಡುಹಿಡಿದಿದ್ದೇವೆ. “ಇದಲ್ಲದೆ, ನಿಯಮಿತವಾಗಿ ಬಹಳಷ್ಟು ಮೊಟ್ಟೆಗಳನ್ನು ತಿನ್ನುವ ವಯಸ್ಕರಿಗೂ (50 ಗ್ರಾಂಗಿಂತ ಹೆಚ್ಚು ಅಥವಾ ದಿನಕ್ಕೆ ಒಂದು ಮೊಟ್ಟೆಗೆ ಸಮನಾಗಿರುತ್ತದೆ) ಮಧುಮೇಹದ ಅಪಾಯವಿದೆ ಎಂದು ಮಿಂಗ್ ಹೇಳಿದ್ದಾರೆ.

BIG BREAKING: ನೈಟ್ ಕರ್ಫ್ಯೂ ಬೆನ್ನಲ್ಲೇ ಸರ್ಕಾರದಿಂದ ಮತ್ತೊಂದು ಮಹತ್ವದ ಕ್ರಮ, ರಾಜ್ಯಾದ್ಯಂತ ಮನೆ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ

ಹಾಗಾದ್ರೆ ಮೊಟ್ಟೆಗಳನ್ನ ತಿನ್ನುವ ಸರಿಯಾದ ವಿಧಾನ ಯಾವುದು..?

ಇದಕ್ಕೆ ಸರಳ ಉತ್ತರ, ಮೊಟ್ಟೆಗಳನ್ನು ಸರಿಯಾಗಿ ಕುದಿಸಿ ತಿನ್ನುವುದು. ಅರ್ಧ ಬೆಂದ ಮೊಟ್ಟೆಗಳಿಂದ ದೂರ ಇರುವುದೇ ಒಳ್ಳೆಯದು. ಹೆಚ್ಚು ತರಕಾರಿಗಳನ್ನ ಬಳಸಿ ಆಮ್ಲೇಟ್ ತಯಾರಿಸಿ ತಿನ್ನಬಹುದು. ಹೆಚ್ಚು ಮೊಟ್ಟೆಗಳನ್ನು ತಿನ್ನುವುದರಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ತಪ್ಪಿಸಲು ನೀವು ಮಿತವಾಗಿ ತಿನ್ನುವುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೆ, ಮೊಟ್ಟೆಗಳೊಂದಿಗೆ ಖಾದ್ಯವನ್ನು ತಯಾರಿಸುವಾಗ ಬೆಣ್ಣೆ, ಎಣ್ಣೆ ಅಥವಾ ಚೀಸ್‌ನ್ನು ಅತಿಯಾಗಿ ಬಳಸಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...