alex Certify ತೂಕ ಇಳಿಸಲು ಪ್ರಯತ್ನ ಮಾಡಿ ಸೋತಿದ್ದೀರಾ…..? ಇಲ್ಲಿದೆ ನೋಡಿ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಸಲು ಪ್ರಯತ್ನ ಮಾಡಿ ಸೋತಿದ್ದೀರಾ…..? ಇಲ್ಲಿದೆ ನೋಡಿ ಪರಿಹಾರ

ದೇಹದ ಆರೋಗ್ಯ ಸಮತೋಲನದಲ್ಲಿ ಇರಬೇಕು ಅಂದರೆ ಪ್ರೋಟಿನ್​ಯುಕ್ತ ಆಹಾರವನ್ನ ಸೇವಿಸೋದು ಅತ್ಯಗತ್ಯ. ಆಹಾರ ಕ್ರಮದಲ್ಲಿ ನೀವು ಪ್ರೋಟಿನ್​ಯುಕ್ತ ಆಹಾರವನ್ನೇ ಸೇವಿಸೋದ್ರಿಂದ ನಿಮಗೆ ಯಾವಾಗಲೂ ಹೊಟ್ಟೆ ತುಂಬಿರುವಂತೆ ಅನುಭವವಾಗುತ್ತೆ. ಇದರಿಂದಾಗಿ ನಿಮ್ಮ ದೇಹದ ತೂಕ ಕೂಡ ಏರಿಕೆಯಾಗೋದಿಲ್ಲ. ಅಲ್ಲದೇ ರೋಗ ನಿರೋಧಕ ಶಕ್ತಿ ಹೆಚ್ಚಿಸೋಕೆ ಪ್ರೋಟಿನ್​ ತುಂಬಾನೇ ಮುಖ್ಯ. ಹೀಗಾಗಿ ನೀವು ನಿಮ್ಮ ನಿತ್ಯ ಆಹಾರ ಕ್ರಮದಲ್ಲಿ ಮೊಟ್ಟೆ, ಬೇಳೆ-ಕಾಳುಗಳು ಸೇರಿಸೋದು ಒಳ್ಳೆಯದು.

ಆದರೆ ಕೇವಲ ಪ್ರೋಟಿನ್​ ಅಂಶವನ್ನ ಹೊಂದಿರುವ ಆಹಾರವೊಂದನ್ನೇ ಸೇವಿಸೋದು ಸಹ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಅತಿಯಾದ ಪ್ರೋಟಿನ್​ಯುಕ್ತ ಆಹಾರ ಸೇವನೆ ನಿಮ್ಮ ತೂಕವನ್ನ ಹೆಚ್ಚಿಸಬಹುದು. ಪ್ರೋಟಿನ್​ ಡಯಟ್​ ಮಾಡುವ ಬಹುತೇಕ ಮಂದಿ ಮಾಡುವ ದೊಡ್ಡ ತಪ್ಪೇ ಇದು. ಅತಿಯಾದ ಪ್ರೋಟಿನ್​ ಸೇವನೆಯಿಂದ ತೂಕ ಹೇಗೆ ಹೆಚ್ಚಳವಾಗುತ್ತೆ ಅನ್ನೋದಕ್ಕೆ ಮಾಹಿತಿ ಇಲ್ಲಿದೆ ನೋಡಿ.

ಅತಿಯಾದ ಪ್ರೋಟಿನ್​ ಅಥವಾ ಅತೀ ಕಡಿಮೆ ಪ್ರಮಾಣ ಪ್ರೋಟಿನ್​ ಸೇವನೆ ಆರೋಗ್ಯಕ್ಕೆ ಹಾನಿಕಾರಿ. ಇವೆರಡರಿಂದಲೂ ನಿಮ್ಮ ದೇಹದ ತೂಕ ಇಳಿಕೆಯಾಗೋದಿಲ್ಲ. ಚಿಕನ್​ ಹಾಗೂ ಮಟನ್​ನಲ್ಲಿ ಅಗಾಧ ಪ್ರಮಾಣದಲ್ಲಿ ಪ್ರೋಟಿನ್​ ಅಡಗಿದೆ. ಆದರೆ ಇದರಲ್ಲಿ ಕಾರ್ಬೋಹೈಡ್ರೇಟ್​ ಕೂಡ ಅತಿಯಾದ ಪ್ರಮಾಣದಲ್ಲಿದೆ ಅನ್ನೋದನ್ನೂ ನೀವು ಮರೆಯುವ ಹಾಗಿಲ್ಲ.

ನಿಮ್ಮ ದೇಹದ ತೂಕ ಹಾಗೂ ನಿಮ್ಮ ಜೀವನ ಕ್ರಮವನ್ನ ಆಧರಿಸಿ ನೀವು ಎಷ್ಟು ಪ್ರೋಟಿನ್​ ಸೇವನೆ ಮಾಡಬೇಕು ಅನ್ನೋದನ್ನ ನಿರ್ಧರಿಸಬೇಕು. ಅತಿಯಾಗಿ ಪ್ರೋಟಿನ್​ ಸೇವನೆ ಮಾಡಿದ್ರೆ ನಿಮ್ಮ ದೇಹ ತೂಕ ಹೆಚ್ಚಾಗಲಿದೆ. ಇದು ಮಾತ್ರವಲ್ಲದೇ ಮಲಬದ್ಧತೆ ಸಮಸ್ಯೆ ಕೂಡ ಶುರುವಾಗಬಹುದು.

ತೂಕ ಇಳಿಸಬೇಕು ಅಂದರೆ ಪ್ರೋಟಿನ್​ಯುಕ್ತ ಆಹಾರ ಸೇವನೆ ಮಾಡಬೇಕು ಅನ್ನೋದು ನಿಜ. ಆದರೆ ಹಾಗಂತ ಕಾರ್ಬೋಹೈಡ್ರೇಟ್​ಯುಕ್ತ ಆಹಾರವನ್ನ ಸೇವಿಸಲೇಬಾರದು ಅನ್ನೋ ಭಾವನೆ ಕೂಡ ತಪ್ಪು. ದೇಹಕ್ಕೆ ಕಾರ್ಬೋಹೈಡ್ರೇಟ್​ನಿಂದ ಎನರ್ಜಿ ಸಿಗಲಿದೆ. ಹೀಗಾಗಿ ನೀವು ಆರೋಗ್ಯಕರ ರೀತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಆದರೂ ಕಾರ್ಬೋಹೈಡ್ರೇಟ್​​​ ಸೇವಿಸಬೇಕು.

ನಿಯಮಿತ ಪ್ರಮಾಣದಲ್ಲಿ ಫೈಬರ್​ ಹಾಗೂ ಕಾರ್ಬೋಹೈಡ್ರೇಟ್​​ ಸೇವನೆ ಮಾಡೋದ್ರಿಂದ ನಿಮ್ಮ ಆರೋಗ್ಯಕ್ಕೆ ಯಾವುದೇ ಹಾನಿ ಉಂಟಾಗೋದಿಲ್ಲ. ಇದರ ಜೊತೆಯಲ್ಲಿ ಬೇಕರಿ ತಿನಿಸುಗಳನ್ನ ಸಂಪೂರ್ಣವಾಗಿ ತ್ಯಜಿಸೋದನ್ನ ಮರೆಯದಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...