alex Certify ‘ನವಾಬ್​​ ಮಲ್ಲಿಕ್​ಗೆ ಭೂಗತ ಪಾತಕಿಗಳ ಜೊತೆ ಸಂಪರ್ಕವಿದೆ’ :ದೇವೇಂದ್ರ ಫಡ್ನವಿಸ್​ ಹೊಸ ಬಾಂಬ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನವಾಬ್​​ ಮಲ್ಲಿಕ್​ಗೆ ಭೂಗತ ಪಾತಕಿಗಳ ಜೊತೆ ಸಂಪರ್ಕವಿದೆ’ :ದೇವೇಂದ್ರ ಫಡ್ನವಿಸ್​ ಹೊಸ ಬಾಂಬ್​

ಡ್ರಗ್ಸ್​​ ಪ್ರಕರಣದ ಬಳಿಕ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ವಿರುದ್ಧ ದಿನಕ್ಕೊಂದು ಆರೋಪಗಳನ್ನು ಹೊರಿಸುತ್ತಾ ಸುದ್ದಿಯಲ್ಲಿರುವ ಎನ್​ಸಿಪಿ ನಾಯಕ್ ನವಾಬ್​ ಮಲ್ಲಿಕ್​ ವಿರುದ್ಧ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್​ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

ಮುಂಬೈನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಎನ್​ಸಿಪಿ ನಾಯಕ ನವಾಬ್​ ಮಲ್ಲಿಕ್​ ಭೂಗತ ಪಾತಕಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ ಎಂದು ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಶೀಘ್ರದಲ್ಲೇ ಈ ಆರೋಪದ ಸಂಬಂಧ ಸಾಕ್ಷ್ಯಗಳನ್ನೂ ಬಿಡುಗಡೆ ಮಾಡಲಿದ್ದೇನೆ ಎಂದು ಫಡ್ನವಿಸ್​ ಹೇಳಿದ್ದಾರೆ
ಯಾರಿಗೆ ಭೂಗತ ಪಾತಕಿಗಳ ಜೊತೆ ಸಂಪರ್ಕ ಇದೆಯೋ ಅವರು ನನ್ನ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಭೂಗತ ಪಾತಕಿಗಳ ಜೊತೆಯಲ್ಲಿ ನವಾಬ್​ ಮಲ್ಲಿಕ್​ ಸಂಪರ್ಕ ಹೊಂದಿರುವ ಬಗ್ಗೆ ಶೀಘ್ರದಲ್ಲೇ ಸಾಕ್ಷ್ಯಗಳನ್ನು ಬಿಡುಗಡೆ ಮಾಡುತ್ತೇನೆ. ದೀಪಾವಳಿ ಹಬ್ಬ ಮುಗಿಯಲಿ ಎಂದು ಕಾಯುತ್ತಿದ್ದೇನೆ ಎಂದು ದೇವೇಂದ್ರ ಫಡ್ನವಿಸ್​ ಆರೋಪಿಸಿದ್ದಾರೆ.

ಡ್ರಗ್​ ಪ್ರಕರಣದಲ್ಲಿ ಈಗಾಗಲೇ ಜೈಲಿನಲ್ಲಿರುವ ಜೈದೀಪ್​ ರಾಣಾ ದೇವೇಂದ್ರ ಫಡ್ನವಿಸ್​ ಜೊತೆ ಹೊಂದಾಣಿಗೆ ಮಾಡಿಕೊಂಡಿದ್ದರು. ಅಲ್ಲದೇ ಎನ್​ಸಿಬಿಗೆ ಸಮೀರ್​ ವಾಂಖೆಡೆಯನ್ನು ವರ್ಗಾವಣೆ ಮಾಡಿದ್ದರ ಹಿಂದೆಯೂ ದೇವೇಂದ್ರ ಫಡ್ನವಿಸ್​ ಕೈವಾಡ ಇತ್ತು ಎಂದು ನವಾಬ್​ ಮಲ್ಲಿಕ್​ ಆರೋಪಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...