alex Certify ಎರಡನೇ ಮದುವೆಯಾದ ಮಹಿಳೆಯಿಂದ ದುಡುಕಿನ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡನೇ ಮದುವೆಯಾದ ಮಹಿಳೆಯಿಂದ ದುಡುಕಿನ ನಿರ್ಧಾರ

ಹಾಸನ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಆನೆಮಹಲ್ ಸಮೀಪ ಎರಡು ವರ್ಷದ ಮಗುವನ್ನು ಕೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

27 ವರ್ಷದ ಪ್ರಜ್ವಲಾ ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ಎರಡು ವರ್ಷದ ಹೆಣ್ಣು ಮಗುವಿಗೆ ನೇಣು ಹಾಕಿದ ನಂತರ ಪ್ರಜ್ವಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪತಿ ಮೋಹನ್ ಮನೆಯಿಂದ ಹೊರಹೋಗಿದ್ದ ಸಂದರ್ಭದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಅಂದ ಹಾಗೆ, ಪ್ರಜ್ವಲಾ ಅವರಿಗೆ ಇದು ಎರಡನೇ ಮದುವೆಯಾಗಿದೆ. ಮೋಹನ್ ಅವರಿಗೂ ಎರಡನೇ ಮದುವೆಯಾಗಿದೆ. ಪ್ರಜ್ವಲಾಗೆ ಇಷ್ಟವಿಲ್ಲದಿದ್ದರೂ ಪೋಷಕರು ಎರಡನೇ ಮದುವೆ ಮಾಡಿದ್ದರಿಂದ ಮನನೊಂದ ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಮೋಹನ್ ಮೊದಲ ಪತ್ನಿ ಅಪಘಾತದಲ್ಲಿ ಮೃತಪಟ್ಟಿದ್ದು, ಪ್ರಜ್ವಲಾ ರನ್ನು ಎರಡನೇ ಮದುವೆಯಾಗಿದ್ದರು. ಸಕಲೇಶಪುರ ಠಾಣೆ ಪೊಲೀಸರು ಪರಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...