alex Certify BIG NEWS: ‘ದನಕ್ಕೆ ಇಂಜಕ್ಷನ್ ಕೊಡುವ ನೀನು ದನ ಕಾಯೋಕೆ ಹೋಗು’; ತಾಲೂಕು ಪಂಚಾಯತ್ EOಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಹೆಚ್.ಡಿ.ರೇವಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ದನಕ್ಕೆ ಇಂಜಕ್ಷನ್ ಕೊಡುವ ನೀನು ದನ ಕಾಯೋಕೆ ಹೋಗು’; ತಾಲೂಕು ಪಂಚಾಯತ್ EOಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಹೆಚ್.ಡಿ.ರೇವಣ್ಣ

ಹಾಸನ: ಟ್ರಕ್ ಟರ್ಮಿನಲ್ ಕಾಮಗಾರಿಗೆ ಅನುಮತಿ ನೀಡಿದ ತಾಲೂಕು ಪಂಚಾಯತ್ ಇಒ ಗೆ ಶಾಸಕ ಹೆಚ್.ಡಿ.ರೇವಣ್ಣ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಹಾಸನದ ಕೆಂಚಟ್ಟಹಳ್ಳಿ ಬಳಿ ಹೇಮಗಂಗೋತ್ರಿ ಸ್ನಾತಕೋತ್ತರ ವಿವಿ ಕ್ಯಾಂಪಸ್ ಬಳಿ ಟ್ರಕ್ ಟರ್ಮಿನಲ್ ಕಾಮಗಾರಿ ಹಿನ್ನೆಲೆಯಲ್ಲಿ ಹೆಚ್.ಡಿ ರೇವಣ್ಣ, ಪಂಚಾಯಿತಿ ಇಒ ಯಶವಂತ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೆಣ್ಣುಮಕ್ಕಳ ಕಾಲೇಜು ಬಳಿ ಇದನ್ನ ಮಾಡೋಕೆ ಬಿಟ್ಟಿದ್ದೀಯಾ? ಡಿಸಿ ಹೇಳ್ತಾನೆ ಎಂದು ಹೀಗೆ ಮಾಡೋದಾ? ಡಿಸಿ ಯಾರದ್ದಾದರೂ ಮನೆಗೆ ನುಗ್ಗು ಅಂದ್ರೆ ನುಗ್ತೀಯಾ? ಲೈಸನ್ಸ್ ತೆಗೆದುಕೊಳ್ಳದೆ ಕಟ್ಟಡ ಕಟ್ಟೋಕೆ ಹೇಗೆ ಬಿಟ್ಟಿದ್ದೀಯಾ? ಪಿಡಿಓಗೆ ಹೆದರಿಸಿ ಬೆದರಿಸಿ ಲೈಸನ್ಸ್ ಕೊಡೊಕೆ ಹೋಗಿದ್ದೀಯಾ? ದನ ಕಾಯೋಕೆ ಹೋಗು ಎಂದು ಏಕವಚನದಲ್ಲಿ ಗುಡುಗಿದ್ದಾರೆ.

ಈ ವೇಳೆ ಟ್ರಕ್ ಟರ್ಮಿನಲ್ ಗೆ ಭೂಮಿ ಮಂಜೂರಾಗಿರುವ ಬಗ್ಗೆ ಇಒ ವಿವರಿಸಲು ಹೋಗುತ್ತಿದ್ದಂತೆ ಇನ್ನಷ್ಟು ಏರುದನಿಯಲ್ಲಿ ರೇಗಾಡಿದ ರೇವಣ್ಣ, ನೀನು ಸರ್ಕಾರಕ್ಕೆ ಬರೆದು ಕೊಡಬೇಕಲ್ವಾ? ದನ ಕಾಯೋನು ನೀನು ದನ ಮೇಯಿಸೋದು ಬಿಟ್ಟು ಇಲ್ಯಾಕೆ ಇಓ ಆಗಿದ್ದೀಯಾ? ದನಕ್ಕೆ ಇಂಜಕ್ಷನ್ ಕೊಡೋನು ನೀನು ನಿನಗೇನು ಗೊತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...