
ಸ್ಟಾರ್ ನಟ ಅನಿಲ್ ಕಪೂರ್ ಯಾರಿಗೆ ಗೊತ್ತಿಲ್ಲ ಹೇಳಿ. ಕನ್ನಡ ಸೇರಿದಂತೆ ಬಾಲಿವುಡ್ ನಲ್ಲಿ ಸೂಪರ್ಡೂಪರ್ ಹಿಟ್ ಸಿನೆಮಾಗಳನ್ನ ಕೊಟ್ಟ ನಟ. ಈಗ ಇದೇ ನಟ ದೊಡ್ಡ ಕಳ್ಳ ಅಂತೆ. ಹೀಗೆ ಹೇಳಿದ್ರೆ ಯಾರು ತಾನೆ ನಂಬ್ತಾರೆ ? ಆದ್ರೆ ಈಗ ಅನಿಲ್ ಕಪೂರ್ ಮೇಲೊಂದು ಆರೋಪ ಕೇಳಿ ಬರ್ತಾ ಇದೆ. ಈ ಆರೋಪ ಮಾಡ್ತಿರೋರು ಬೇರೆ ಯಾರೋ ಅಲ್ಲ. ಅನಿಲ್ ಕಪೂರ್ ಮುದ್ದಿನ ಮಗ ಹರ್ಷವರ್ಧನ್ ಕಪೂರ್.
ಅಪ್ಪನನ್ನೇ ಕಳ್ಳ ಅಂದ ಹರ್ಷವರ್ಧನ್ ರ ಈ ಆರೋಪದಿಂದ ಎಲ್ಲರೂ ಶಾಕ್ ಆಗಿದ್ದಾರೆ. ಅಸಲಿಗೆ ಅನಿಲ್ ಕಪೂರ್ ಹಾಗೂ ಹರ್ಷವರ್ಧನ್ ಕಪೂರ್ ಈ ತಂದೆ ಮಗನ ಜೋಡಿ ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿರೋ ಥಾರ್ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದೆ. ಸಿನೆಮಾ ಕುರಿತಾಗಿ ಇಂಟರ್ವ್ಯೂವ್ ಕೊಡುತ್ತಿರೋ ಸಮಯದಲ್ಲಿ, ಮಗ ಹರ್ಷವರ್ಧನ್ ಕಪೂರ್ ಅಪ್ಪನ ಗುಟ್ಟೊಂದನ್ನ ಬಟಾಬಯಲು ಮಾಡಿದ್ದಾರೆ. ಅದೇನಂದ್ರೆ, ಶೂಟಿಂಗ್ ಸಮಯದಲ್ಲಿ ಅಪ್ಪ ತನ್ನ ಊಟ ಸೇರಿದಂತೆ, ಬೇರೆಯವರ ಊಟವನ್ನು ಕದ್ದು ತಿನ್ನುತ್ತಿದ್ದರು. ಅನ್ನೋ ಸಿಕ್ರೇಟ್ ನ ರಿವೀಲ್ ಮಾಡಿದ್ದಾರೆ.
ಮಗ ಮಾಡಿರೋ ಆರೋಪ ಕೇಳಿ ಅನಿಲ್ ಕಪೂರ್ ಸೈಲೆಂಟಾಗಿ ಕೂತಿಲ್ಲ. ಬದಲಾಗಿ ಅವರು ಸಹ ಟಕ್ಕರ್ ಕೊಟ್ಟಿದ್ದಾರೆ. ನಾನೊಬ್ಬ ವಿಶಾಲ ಹೃದಯವಂತ, ನಾನು ನನ್ನ ಊಟವನ್ನ ಹಂಚಿಕೊಂಡು ತಿನ್ನೋದ್ರಲ್ಲಿ ಖುಷಿ ಪಡ್ತೇನೆ. ಆದ್ರೆ ಕೆಲವರು ಸ್ವಾರ್ಥಿಗಳಿದ್ದಾರೆ. ಅವರು ಇದು ನನ್ನ ಊಟ, ಇದು ನನ್ನ ಪಾಲಿನದ್ದು, ಇದನ್ನ ಮುಟ್ಬೇಡಿ ಅಂತೆಲ್ಲ ಹೇಳ್ತಿರ್ತಾರೆ. ನಾನು ಹುಟ್ಟಿಸಿ, ಬೆಳೆಸಿದ ಮಗ ನೀನು. ನನಗೆ ನಿನ್ನ ಪಾಲಿನ ಊಟ, ಸ್ವಲ್ಪನಾದ್ರೂ ತಿನ್ನೋಕೆ ಬಿಡು. ಅಪ್ಪನಾದ ನನಗೆ ಅಷ್ಟು ಹಕ್ಕಿಲ್ಲವೇ ? ಅಂತ ನಟ ಅನಿಲ್ ಕಪೂರ್ ಮಗನಿಗೆ ಹೇಳಿದ್ದಾರೆ.
ಹರ್ಷವರ್ಧನ್, ಅನಿಲ್ ಕಪೂರ್ ಮುದ್ದಿನ ಮಗನಾದರೂ, ಅಪ್ಪ – ಮಗ ಒಂದೇ ಮನೆಯಲ್ಲಿ ಇಲ್ಲ. ಹರ್ಷವರ್ಧನ್ ಸ್ವತಂತ್ರವಾಗಿ ಇರಲು ಬಯಸುತ್ತಾರೆ. ಆದ್ದರಿಂದ ಅವರು ಬೇರೆ ಮನೆ ಮಾಡಿಕೊಂಡಿದ್ದಾರೆ. ಆದರೆ ಈಗ ಥಾರ್ ಸಿನೆಮಾದಲ್ಲಿ ಅಪ್ಪ-ಮಗ ಜೊತೆ ಜೊತೆಯಲ್ಲಿ ಕೆಲ ಸಮಯ ಕಳೆದಿದ್ದಾರೆ. ಈ ಸಮಯದಲ್ಲಿ ಆಟ-ತುಂಟಾಟಗಳು ನಡೆದಿವೆ. ಆಗ ನಡೆದ ಘಟನೆಯನ್ನೇ ಈಗ ಹರ್ಷರ್ಧನ್, ಥಾರ್ ಸಿನೆಮಾದ ಇಂಟರ್ವ್ಯೂವ್ ಒಂದರಲ್ಲಿ ಹೇಳಿಕೊಂಡಿದ್ದಾರೆ.