alex Certify ಡಾನ್ಸ್ ಗ್ರೂಪ್‌ನ ಕ್ವಿಕ್ ಸ್ಟೈಲ್ ವೈರಲ್; ಅನಿಲ್ ಕಪೂರ್ ಅವರನ್ನು ‘ಲೆಜೆಂಡ್’ ಎಂದು ಕರೆದ ನೆಟ್ಟಿಗರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಾನ್ಸ್ ಗ್ರೂಪ್‌ನ ಕ್ವಿಕ್ ಸ್ಟೈಲ್ ವೈರಲ್; ಅನಿಲ್ ಕಪೂರ್ ಅವರನ್ನು ‘ಲೆಜೆಂಡ್’ ಎಂದು ಕರೆದ ನೆಟ್ಟಿಗರು….!

ನಾರ್ವೇಯನ್ ಡ್ಯಾನ್ಸ್ ಕ್ರ್ಯೂ ಕ್ವಿಕ್ ಸ್ಟೈಲ್‌ನ ಡ್ಯಾನ್ಸ್ ಕ್ಲಿಪ್‌ ಇತ್ತೀಚೆಗೆ ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆಯುತ್ತಿದೆ‌. ಇದೀಗ, ಬಾಲಿವುಡ್ ನಟ ಅನಿಲ್ ಕಪೂರ್ ಅವರು ‘ಏಕ್ ಲಡ್ಕಿ ಕೋ ದೇಖಾ…’ ಹಾಡಿನ ಪ್ರದರ್ಶನ ನೀಡಲು ಈ ಗುಂಪಿಗೆ ಸಹಕರಿಸಿದ್ದಾರೆ.

ಕ್ವಿಕ್ ಸ್ಟೈಲ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ಕ್ಲಿಪ್ ಅಪ್‌ಲೋಡ್ ಮಾಡಲಾಗಿದೆ. ಡ್ಯಾನ್ಸರ್‌ಗಳ ಗುಂಪು ಮಹಿಳಾ ಡ್ಯಾನ್ಸರ್‌ನತ್ತ ತಿರುಗಿ ನೋಡುವುದನ್ನು ಕಿರು ಕ್ಲಿಪ್ ತೋರಿಸುತ್ತದೆ. ಕೊನೆಯಲ್ಲಿ ಮೂಲೆಯಲ್ಲಿ ನಿಂತಿರುವ ಅನಿಲ್ ಕಪೂರ್ ಅವರನ್ನು ಗುರುತಿಸಬಹುದು.

ಹುಡುಗರಿಗೆ ತಿರುಗುವಂತೆ ಸೂಚಿಸುತ್ತಾ ಅವರೆಲ್ಲ ಅನಿಲ್ ಕಪೂರ್‌ರನ್ನು ಹಿಂಬಾಲಿಸುವ ಮೂಲಕ ವಿಡಿಯೋ‌ ಕೊನೆಗೊಳ್ಳುತ್ತದೆ‌.

ಅಪ್‌ಲೋಡ್ ಮಾಡಿದ ನಂತರ ವೀಡಿಯೊ 222ಕೆ ಲೈಕ್ ಪಡೆದಿದೆ. ನೂರಾರು ಮಂದಿ ಕಾಮೆಂಟ್ ಮಾಡಿ ಅನಿಲ್ ಕಪೂರ್ ಅವರನ್ನು ಹೊಗಳಿದ್ದಾರೆ.

ಈ ಹಿಂದೆ ಈ ತಂಡವು ಕಂಗನಾ ರಣಾವತ್ ಅವರ ತನು ವೆಡ್ಸ್ ಮನು ಚಿತ್ರದ ಹಿಟ್ ಹಾಡಿಗೆ ತಮ್ಮ ಚಮತ್ಕಾರಿ ಸ್ಟೆಪ್ ಹಾಕಿ ಗಮನ ಸೆಳೆದಿತ್ತು.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...