alex Certify Watch Video: ‘ಮೌಂಟ್​ ಎವರೆಸ್ಟ್’ ​ನ ನಯನ ಮನೋಹರ ದೃಶ್ಯ ಹಂಚಿಕೊಂಡ ಉದ್ಯಮಿ ಹರ್ಷ್​ ಗೋಯೆಂಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video: ‘ಮೌಂಟ್​ ಎವರೆಸ್ಟ್’ ​ನ ನಯನ ಮನೋಹರ ದೃಶ್ಯ ಹಂಚಿಕೊಂಡ ಉದ್ಯಮಿ ಹರ್ಷ್​ ಗೋಯೆಂಕಾ

ಹೊಸ ಡ್ರೋನ್​ ಶಾಟ್​ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗುತ್ತಿದೆ. ಇತ್ತೀಚೆಗೆ, ಉದ್ಯಮಿ ಹರ್ಷ್​ ಗೋಯೆಂಕಾ ಅವರು ಟ್ವಿಟ್ಟರ್​ನಲ್ಲಿ ಪರ್ವತಾರೋಹಿಯೊಬ್ಬರು ಸೆರೆಹಿಡಿದ ಹಿಮಾಲಯ ಪರ್ವತಗಳ ಅತ್ಯುನ್ನತ ಶಿಖರವಾದ ಮೌಂಟ್​ ಎವರೆಸ್ಟ್​ನ ಭವ್ಯವಾದ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.

ವೈರಲ್​ ಆಗಿರುವ ಕ್ಲಿಪ್​ ಹಿಮದ ಹೊದಿಕೆಯಿಂದ ಆವೃತವಾದ ಪರ್ವತಗಳ ವೈಮಾನಿಕ ನೋಟವನ್ನು ತೋರಿಸುತ್ತದೆ. ಕೆಲವು ಸಣ್ಣ ತುಣುಕುಗಳ ನಂತರ, ಇದು ಪರ್ವತಾರೋಹಿಗಳ ಗುಂಪನ್ನು ಶಿಖರದ ಕಡೆಗೆ ಚಾರಣವನ್ನು ತೋರಿಸುತ್ತದೆ.

ಕಿತ್ತಳೆ ಬಣ್ಣದ ಛಾಯೆಗಳಲ್ಲಿ ಹಿಮ ಪರ್ವತಗಳನ್ನು ಚಿತ್ರಿಸುವ ಅದ್ಭುತವಾದ ಸೂರ್ಯೋದಯ ವೀಡಿಯೊದಲ್ಲಿ ಕಾಣಬಹುದು. ಆ ವೇಳೆ ಪರ್ವತಾರೋಹಿಯೊಬ್ಬ ಮೌಂಟ್​ ಎವರೆಸ್ಟ್​ ಶಿಖರದ ತುದಿಯಲ್ಲಿ ಕುಳಿತಿದ್ದಾನೆ.

ಮುಂದಿನ ಭಾಗದಲ್ಲಿ ಸಮುದ್ರ ಮಟ್ಟದಿಂದ 9,232.86 ಮೀಟರ್​ಗಳ ಮೇಲೆ ತನ್ನ ಡ್ರೋನ್​ ಅನ್ನು ಹಾರಿಸುತ್ತಿರುವುದನ್ನು ತೋರಿಸಿದೆ. 360-ಡಿಗ್ರಿ ವೈಮಾನಿಕ ಶಾಟ್​ ನೋಡುಗರನ್ನು ಉಸಿರುಕಟ್ಟಿಸುವಂತಿದೆ. ಏಕೆಂದರೆ ಇದು ಪ್ರತಿ ಕೋನದಿಂದ ಶಿಖರವನ್ನು ತೋರಿಸುತ್ತದೆ.

ಎರಡು ನಿಮಿಷಗಳ ವಿಡಿಯೊದಿಂದ ಟ್ವಿಟಿಗರು ಮಂತ್ರಮುಗ್ಧರಾಗಿದ್ದಾರೆ. “ಎಂತಹ ಅದ್ಭುತ ದೃಶ್ಯಗಳು…… ಹೊಸ ಯುಗದ ತಂತ್ರಜ್ಞಾನವು ಪ್ರಕೃತಿ ಅದ್ಭುತಗಳನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ” ಎಂದು ಬಳಕೆದಾರರಲ್ಲಿ ಒಬ್ಬರು ಅಭಿಪ್ರಾಯ ನೀಡಿದ್ದಾರೆ.

ಇನ್ನೊಬ್ಬ ಬಳಕೆದಾರ, ನಾನು ಸ್ವರ್ಗವನ್ನು ನೋಡಲು ಬಯಸಿದ್ದೆ. ನಾನು ಹಿಮಾಲಯಕ್ಕೆ ಹೋದೆ ಮತ್ತು ಸ್ವರ್ಗ ಹೇಗಿರುತ್ತದೆ ಎಂದು ತಿಳಿದಿದ್ದೆ ! ಎಂದು ಅಭಿಪ್ರಾಯ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...