
ಅಮೆರಿಕಾ ಮೂಲದ ದ್ವಿಚಕ್ರವಾಹನ ಕಂಪನಿಯ ಬಹುನಿರೀಕ್ಷಿತ ಹಾರ್ಲೆ-ಡೆವಿಡ್ಸನ್ X440 ಬೈಕ್ ಗಳು ಭಾರತೀಯ ಮಾರುಕಟ್ಟೆಯಲ್ಲಿ ಕೊನೆಗೂ ಬಿಡುಗಡೆಯಾಗಿವೆ. ಆರಂಭದಲ್ಲಿ ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಂಡು ಈಗ ತನ್ನ ಬೆಲೆ ಏರಿಸಿಕೊಂಡಿದೆ.
ಹೊಸ ಹಾರ್ಲೆ-ಡೆವಿಡ್ಸನ್ X440 ಬೈಕ್ ಕೈಗೆಟುಕುವ ದರದಲ್ಲಿ ಬಿಡುಗಡೆಯಾಗುವ ಮೂಲಕ ರಾಯಲ್ ಎನ್ ಫೀಲ್ಡ್ ಗೆ ಠಕ್ಕರ್ ಕೊಟ್ಟಿದೆ. ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಹಾರ್ಲೆ- ಡೆವಿಡ್ಸನ್ ಹೊಸ ಬೈಕ್ ಗಳು ಬಿರುಗಾಳಿ ಎಬ್ಬಿಸಿವೆ.
ಹೊಸ ಹಾರ್ಲೆ ಡೆವಿಡ್ಸನ್ X440 ಬೈಕ್ ನ ಪರಿಚಯಾತ್ಮಕ ದರ 2,29,000 ಆಗಿತ್ತು. ಆದರೆ ಇದೀಗ ಕೊಂಚ ಬೆಲೆ ಏರಿಕೆಯಾಗಿದ್ದು, ಈ ಬೈಕಿನ ಬೆಲೆ 2,39,500 ರೂಪಾಯಿ ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಬೈಕ್ ಗಳು ಮಾರಾಟವಾಗುತ್ತಿವೆ.