alex Certify ಸಪ್ನಾ ಚೌಧರಿ `ನಾಗಿನ್’ ಡ್ಯಾನ್ಸ್ ಭಾರೀ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಪ್ನಾ ಚೌಧರಿ `ನಾಗಿನ್’ ಡ್ಯಾನ್ಸ್ ಭಾರೀ ವೈರಲ್

ಬಿಗ್ ಬಾಸ್ ಖ್ಯಾತಿಯ ಹರ್ಯಾನ್ವಿ ಡ್ಯಾನ್ಸರ್ ಸಪ್ನಾ ಚೌಧರಿ ಅವರ ಹಳೆಯ ನಾಗಿನ್ ಡ್ಯಾನ್ಸ್ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.

ಹರ್ಯಾಣದಲ್ಲಿ ಸಪ್ನಾ ಚೌಧರಿಯವರ ಕಾರ್ಯಕ್ರಮವೆಂದರೆ ಭಾರೀ ಜನಸ್ತೋಮವೇ ಸೇರುತ್ತದೆ. ಅವರು ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುತ್ತಿದ್ದರೆ, ಪ್ರೇಕ್ಷಕ ಸಮುದಾಯ ಹುಚ್ಚೆದ್ದು ಕುಣಿಯುತ್ತಿರುತ್ತದೆ. ಹೀಗೆ ಕಾರ್ಯಕ್ರಮವೊಂದರಲ್ಲಿ ಸಪ್ನಾ ನೃತ್ಯ ಪ್ರದರ್ಶನ ಮಾಡುತ್ತಿದ್ದ ಸಂದರ್ಭದಲ್ಲಿ ವೇದಿಕೆಯ ಮುಂಭಾಗ ಹಣ್ಣು ಹಣ್ಣು ಮುದುಕರೊಬ್ಬರು ಹೆಜ್ಜೆ ಹಾಕಿದ್ದ ವಿಡಿಯೋ ಭಾರೀ ವೈರಲ್ ಆಗಿತ್ತು.

 

ಇದೀಗ ಸಪ್ನಾ ಅವರ ಹಳೆಯ ನಾಗಿನ್ ಡ್ಯಾನ್ಸ್ ಅನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಅದು ಭಾರೀ ವೈರಲ್ ಆಗಿದೆ. ಸೋನೋಟೆಕ್ ಪಂಜಾಬಿ ಎಂಬ ಚಾನೆಲ್ ಈ ಡ್ಯಾನ್ಸ್ ನ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದೆ. ವೇದಿಕೆ ಮೇಲೆ ಸಪ್ನಾ ನಾಗಿನ್ ಡ್ಯಾನ್ಸ್ ಮಾಡುತ್ತಿದ್ದರೆ, ವೇದಿಕೆಯ ಕೆಳಭಾಗದಲ್ಲಿ ನೂರಾರು ಮಂದಿ ಪ್ರೇಕ್ಷಕರು ಸಿಗ್ನೇಚರ್ ಢುಮ್ಕಾ ಸ್ಟೆಪ್ ಹಾಕುತ್ತಾ ಮೋಜು ಮಾಡಿದ್ದಾರೆ. ಈ ವಿಡಿಯೋವನ್ನು 861k ವೀಕ್ಷಣೆಯಾಗಿದ್ದು, ಸಪ್ನಾ ಜನಪ್ರಿಯತೆಗೆ ಸಾಕ್ಷಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...