alex Certify ಮಾವನಿಂದಲೇ ಲೈಂಗಿಕ ಕಿರುಕುಳ, ದೂರು ನೀಡಿದ ಸೊಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾವನಿಂದಲೇ ಲೈಂಗಿಕ ಕಿರುಕುಳ, ದೂರು ನೀಡಿದ ಸೊಸೆ

ಬೆಂಗಳೂರು: ಲೈಂಗಿಕ ಸಂಬಂಧ ಬೆಳೆಸುವಂತೆ ಮಾವ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಮಹಿಳೆಯೊಬ್ಬರು ಆರ್.ಆರ್. ನಗರ ಠಾಣೆಗೆ ದೂರು ನೀಡಿದ್ದಾರೆ.

ರಾಜರಾಜೇಶ್ವರಿನಗರ ನಿವಾಸಿಯಾಗಿರುವ 30 ವರ್ಷದ ಮಹಿಳೆ ದೂರು ನೀಡಿದ್ದು, ಆಕೆಯ ಗಂಡ ಅಶೋಕ, ಮಾವ ಸಿದ್ದಯ್ಯ ಸೇರಿದಂತೆ ಐದು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 2012 ರಲ್ಲಿ ಅಶೋಕ ಜೊತೆಗೆ ಮಹಿಳೆಯ ಮದುವೆಯಾಗಿದ್ದು, ವಿದ್ಯಾರಣ್ಯಪುರದ ಗಂಡನ ಮನೆಯಲ್ಲಿ ನೆಲೆಸಿದ್ದರು.

ಎರಡು ವರ್ಷ ಮಕ್ಕಳಾಗದ ಕಾರಣ ಐಟಿಐನಿಂದ ಮಗು ಪಡೆದಿದ್ದು, ಈ ವಿಷಯವನ್ನು ಯಾರಿಗೂ ತಿಳಿಸದಂತೆ ಮಹಿಳೆಗೆ ತಾಕೀತು ಮಾಡಲಾಗಿತ್ತು. ಯಾರಿಗಾದರೂ ವಿಷಯ ಹೇಳಿದರೆ ಡೈವೋರ್ಸ್ ಕೊಡುವುದಾಗಿ ಅಶೋಕ ಬೆದರಿಕೆ ಹಾಕಿದ್ದ. ಮಾವ ಸಿದ್ದಯ್ಯ ಸೊಸೆಗೆ ಮಾನಸಿಕವಾಗಿ ಹಿಂಸೆ ನೀಡಿ ದೈಹಿಕ ಸಂಬಂಧ ಬೆಳೆಸಿದರೆ ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳುತ್ತಿದ್ದ. 2014 ರಲ್ಲಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಅಸಭ್ಯವಾಗಿ ವರ್ತಿಸಿ ದೌರ್ಜನ್ಯವೆಸಗಿದ್ದ ಎನ್ನಲಾಗಿದೆ. ನೊಂದ ಮಹಿಳೆ ಗಂಡ ಹಾಗೂ ಆತನ ಮನೆಯವರ ವಿರುದ್ಧ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...