alex Certify ಅಶ್ಲೀಲ ವಿಡಿಯೋ ತೋರಿಸಿ ಅದರಲ್ಲಿರುವಂತೆಯೇ ಲೈಂಗಿಕ ಕ್ರಿಯೆಗೆ ಪತಿ ಬಲವಂತ, ಪತ್ನಿ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಶ್ಲೀಲ ವಿಡಿಯೋ ತೋರಿಸಿ ಅದರಲ್ಲಿರುವಂತೆಯೇ ಲೈಂಗಿಕ ಕ್ರಿಯೆಗೆ ಪತಿ ಬಲವಂತ, ಪತ್ನಿ ಮಾಡಿದ್ದೇನು ಗೊತ್ತಾ…?

ಬೆಂಗಳೂರು: ಪತ್ನಿಗೆ ಅಶ್ಲೀಲ ವಿಡಿಯೋ ತೋರಿಸಿದ ಪತಿರಾಯ ಅದರಲ್ಲಿ ಇರುವಂತೆಯೇ ಲೈಂಗಿಕಕ್ರಿಯೆಗೆ ಸಹಕರಿಸಬೇಕೆಂದು ಬಲವಂತ ಮಾಡಿದ ಘಟನೆ ನಡೆದಿದೆ. ವಿಡಿಯೋದಲ್ಲಿರುವಂತೆ ಲೈಂಗಿಕ ಕ್ರಿಯೆಗೆ ಸಹಕಾರ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ನೊಂದ ಪತ್ನಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಾಗರಬಾವಿಯ ಎರಡನೇ ಹಂತದಲ್ಲಿ ವಾಸವಾಗಿರುವ 36 ವರ್ಷದ ಮಹಿಳೆ ದೂರು ನೀಡಿದ್ದು 47 ವರ್ಷದ ಉದ್ಯಮಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

2000ದಲ್ಲಿ ದಂಪತಿಗೆ ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇತ್ತೀಚೆಗೆ ಜೂಜು ಆಡುವುದನ್ನು ರೂಢಿಸಿಕೊಂಡಿದ್ದ ಪತಿರಾಯ, ಪತ್ನಿ ಮನೆಯವರು ನೀಡಿದ ಚಿನ್ನಾಭರಣ ಮತ್ತು ಕೂಡಿಟ್ಟ ಹಣವನ್ನು ಜೂಜಾಟಕ್ಕೆ ಬಳಸಿಕೊಂಡಿದ್ದಾನೆ. ಪತ್ನಿ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿದ್ದ.

ಆಗಾಗ ಅಶ್ಲೀಲ ವಿಡಿಯೋವನ್ನು ಪತ್ನಿಗೆ ತೋರಿಸಿ ಅದರಲ್ಲಿ ಇರುವಂತೆ ತನ್ನೊಂದಿಗೆ ಲೈಂಗಿಕಕ್ರಿಯೆಗೆ ಸಹಕರಿಸುವಂತೆ ಕಿರುಕುಳ ನೀಡಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಪತ್ನಿ ಹೆಸರಲ್ಲಿದ್ದ ನಿವೇಶನವನ್ನು ತನ್ನ ಹೆಸರಿಗೆ ಬರೆಯುವಂತೆ ಬೆದರಿಸಿದ್ದಾನೆ ಎಂದು ದೂರು ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...