alex Certify ರ್ಯಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರ್ಯಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ

ಬೆಂಗಳೂರು: ರ್ಯಾಪಿಡೋ ಚಾಲಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಯಲಹಂಕ ಉಪನಗರ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಯಲಹಂಕದಿಂದ ಇಂದಿರಾ ನಗರಕ್ಕೆ ತೆರಳಲು ಬೈಕ್ ಬುಕ್ ಮಾಡಲಾಗಿತ್ತು. ಒಟಿಪಿ ನೆಪದಲ್ಲಿ ಯುವತಿಯ ಮೊಬೈಲ್ ಪಡೆದುಕೊಂಡಿದ್ದ ರ್ಯಾಪಿಡ್ ಸವಾರ ಬೈಕ್ ನಲ್ಲಿ ತೆರಳುವಾಗ ಲೈಂಗಿಕ ಕಿರುಕುಳ ನೀಡಿದ್ದಾನೆ. ಕಿರುಕುಳದಿಂದ ಬೇಸತ್ತು ಬೈಕ್ ನಿಂದ ಯುವತಿ ಜಂಪ್ ಮಾಡಿದ್ದಾಳೆ.

ಖಾಸಗಿ ಕಂಪನಿಯಲ್ಲಿ ಆರ್ಕಿಟೆಕ್ಚರ್ ಆಗಿರುವ ಯುವತಿ ಯಲಹಂಕ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಆಂಧ್ರಪ್ರದೇಶ ಮೂಲದ ದೀಪಕ್ ರಾವ್ ನನ್ನು ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 21ರಂದು ನಾಗೇನಹಳ್ಳಿಯ ಖಾಸಗಿ ಕಾಲೇಜು ಬಳಿ ಘಟನೆ ನಡೆದಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...