alex Certify ಸಲುಗೆಯಿಂದಿದ್ದ ಯುವತಿಯೊಂದಿಗೆ ಅಶ್ಲೀಲ ವರ್ತನೆ: ಯುವಕ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲುಗೆಯಿಂದಿದ್ದ ಯುವತಿಯೊಂದಿಗೆ ಅಶ್ಲೀಲ ವರ್ತನೆ: ಯುವಕ ಅರೆಸ್ಟ್

ಬೆಂಗಳೂರು: ಫೇಸ್ಬುಕ್ ಮೂಲಕ ಪರಿಚಯವಾಗಿದ್ದ ಯುವತಿಗೆ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ ಯುವಕ ಕಿರುಕುಳ ನೀಡಿ, ಅಶ್ಲೀಲ ವರ್ತನೆ ತೋರಿದ್ದಾನೆ. ನೊಂದ ಯುವತಿ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಪಾಪರೆಡ್ಡಿಪಾಳ್ಯ ನಿವಾಸಿಯಾಗಿರುವ 27 ವರ್ಷದ ಯುವತಿಗೆ ಶ್ರವಣ್ ಕುಮಾರ್ ಎಂಬಾತ ಕಿರುಕುಳ ನೀಡಿದ್ದು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ಕ್ಲಿನಿಕ್ ಒಂದರಲ್ಲಿ ಕೆಲಸ ಮಾಡುತ್ತಿರುವ ಯುವತಿಗೆ ಫೇಸ್ಬುಕ್ನಲ್ಲಿ ಶ್ರವಣ್ ಕುಮಾರ್ ಪರಿಚಿತನಾಗಿದ್ದ. ಆರೋಗ್ಯ ಸರಿ ಇಲ್ಲವೆಂದು ಯುವತಿಗೆ ತನ್ನ ಮೇಲೆ ಕನಿಕರ ಬರುವಂತೆ ಮಾತನಾಡಿ ಪರಿಚಯಿಸಿಕೊಂಡಿದ್ದಾನೆ. ನಂತರ ಆಕೆಯ ಮೊಬೈಲ್ ನಂಬರ್ ಪಡೆದು ಅಶ್ಲೀಲವಾಗಿ ಮಾತನಾಡಲು ಆರಂಭಿಸಿದ್ದರಿಂದ ನಂಬರ್ ಬ್ಲಾಕ್ ಮಾಡಿದ್ದಾಳೆ. ಪದೇ ಪದೇ ಕರೆ ಮಾಡುತ್ತಿದ್ದ ಆರೋಪಿ ಅಶ್ಲೀಲವಾಗಿ ವರ್ತಿಸಿ ಪ್ರೀತಿಸುತ್ತೇನೆ. ಒಪ್ಪಿಕೊಳ್ಳದಿದ್ದರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ಮನೆಯವರಿಗೆ ವಿಷಯ ತಿಳಿಸುವುದಾಗಿ ಯುವತಿ ಹೇಳಿದರೂ ನಿರ್ಲಕ್ಷಿಸಿದ್ದ ಆರೋಪಿ ಕಿರುಕುಳ ನೀಡುವುದನ್ನು ಮುಂದುವರೆಸಿದ್ದು, ಜನವರಿ 29 ರಂದು ಸಂಜೆ ಯುವತಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದು ಮೊಬೈಲ್ ಕಸಿದುಕೊಳ್ಳಲು ಪ್ರಯತ್ನ ನಡೆಸಿದ್ದಾನೆ. ನಿರಾಕರಿಸಿದಾಗ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದ್ದು, ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...