alex Certify 86 ವರ್ಷಗಳ ಬಳಿಕ ಪ್ರತ್ಯೇಕ ಜಾತಿಯ ಪಟ್ಟಿ ಸೇರಿದ ಹನುಮಾನ್ ಹೆಸರಿನ ಪಕ್ಷಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

86 ವರ್ಷಗಳ ಬಳಿಕ ಪ್ರತ್ಯೇಕ ಜಾತಿಯ ಪಟ್ಟಿ ಸೇರಿದ ಹನುಮಾನ್ ಹೆಸರಿನ ಪಕ್ಷಿ

ಭಾರತ ಹಾಗೂ ಶ್ರೀಲಂಕಾಗಳಲ್ಲಿ ಕಂಡು ಬರುವ ಹನುಮಾನ್ ಪ್ಲೋವರ್‌ ಹೆಸರಿನ ಪಕ್ಷಿಗೆ ಉಪ ಜಾತಿಯಿಂದ ಜಾತಿ ಪಟ್ಟಿಗೆ ಮರಳಿ ಸೇರಿಸಲಾಗಿದೆ. ಈ ಮೂಲಕ ಈ ಪಕ್ಷಿಗಳ ಸಂರಕ್ಷಣೆಗೆ ಇನ್ನಷ್ಟು ಹೆಚ್ಚಿನ ಗಮನ ನೀಡಬಹುದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಹಿಂದೂ ದೇವತೆ ಹನುಮಂತನ ಹೆಸರಿನಲ್ಲಿ ಕರೆಯಲಾಗುವ ಈ ಪಕ್ಷಿ ಬೆಳ್ಳಗಿದ್ದು ಸಣ್ಣನೆಯ ಆಕೃತಿ ಹೊಂದಿದೆ. 1930ರ ವೇಳೆ ಕೆಂಟಿಶ್ ಪ್ಲೋವರ್‌ ಹಾಗೂ ಹನುಮಾನ್ ಪ್ಲೋವರ್‌ಗಳನ್ನು ಒಂದೇ ಎಂದು ಪರಿಗಣಿಸಲಾಗಿತ್ತು. ಆದರೆ ಡಿಎನ್‌ಎ ಸೀಕ್ವೆನ್ಸಿಂಗ್‌ ಬಲದಿಂದ ಈ ಪಕ್ಷಿಗಳ ನಡುವಿನ ಅತ್ಯಲ್ಪ ವ್ಯತ್ಯಾಸಗಳನ್ನು ಗುರುತಿಸಿ ಪ್ರತ್ಯೇಕಿಸಲಾಗಿತ್ತು. ಇದೀಗ 86 ವರ್ಷಗಳ ಬಳಿಕ ಹನುಮಾನ್ ಪ್ಲೋವರ್‌‌ ಅನ್ನು ಪ್ರತ್ಯೇಕ ಜಾತಿ ಪಟ್ಟಿಗೆ ಸೇರಿಸಲಾಗಿದೆ.

ಜೌಗು ಪ್ರದೇಶಗಳಲ್ಲಿ ಕಾಣಸಿಗುವ ಈ ಪಕ್ಷಿಗಳನ್ನು ಸಂರಕ್ಷಿಸಲು ಇನ್ನಷ್ಟು ಹೆಚ್ಚಿನ ನಿಧಿಯನ್ನು ಇನ್ನು ಮುಂದೆ ಪಡೆಯಬಹುದು ಎಂಬ ವಿಶ್ವಾಸವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...