alex Certify ಹೌದು, ನಾನು ಸಲಿಂಗಕಾಮಿ……ನಿಮಗೇನಾದರೂ ಸಮಸ್ಯೆ ಇದೆಯೇ…? ಥಿಯೇಟರ್ ನಲ್ಲಿ ಬಹಿರಂಗವಾಗಿ ಕೂಗಿದ ಯುವಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೌದು, ನಾನು ಸಲಿಂಗಕಾಮಿ……ನಿಮಗೇನಾದರೂ ಸಮಸ್ಯೆ ಇದೆಯೇ…? ಥಿಯೇಟರ್ ನಲ್ಲಿ ಬಹಿರಂಗವಾಗಿ ಕೂಗಿದ ಯುವಕ..!

ನಟ ರಾಜ್‌ಕುಮಾರ್ ರಾವ್ ಮತ್ತು ಭೂಮಿ ಪೆಡ್ನೇಕರ್ ಅವರ ʼಬದಾಯಿ ದೋʼ ಸಿನಿಮಾ ಕಳೆದ ವಾರ ಥಿಯೇಟರ್‌ಗಳಲ್ಲಿ ಹಿಟ್ ಆಗಿತ್ತು. ಚಿತ್ರದಲ್ಲಿ ಅವರಿಬ್ಬರನ್ನೂ ಸಲಿಂಗಕಾಮಿಗಳು ಎಂದು ತೋರಿಸಲಾಗುತ್ತದೆ. ಅಲ್ಲದೆ ಅವರು ಅನುಕೂಲಕರ ಮದುವೆಗೆ ಒಪ್ಪಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.

ಇತ್ತೀಚೆಗೆ ತನ್ನ ಸಂಗಾತಿಯೊಂದಿಗೆ ಚಲನಚಿತ್ರವನ್ನು ವೀಕ್ಷಿಸಿದ ಇನ್ಸ್ಟಾಗ್ರಾಂ ಬಳಕೆದಾರರೊಬ್ಬರು ತಾವು ಥಿಯೇಟರ್ ನಲ್ಲಿ ಜಗಳವಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಬದಾಯಿ ದೋ ಸಿನಿಮಾ ವೀಕ್ಷಿಸುವಾಗ ಥಿಯೇಟರ್‌ನಲ್ಲಿ ಜಗಳ ಮಾಡಿದ್ದಾಗಿ ಪ್ರಿಯಾಂಜುಲ್ ಜೋಹಾರಿ ಹೇಳಿದ್ದಾರೆ. ಅಲ್ಲದೆ ಈ ವೇಳೆ ತನ್ನ ಸಂಗಾತಿ ಶಾಂತ ರೀತಿಯಲ್ಲಿರುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದರಂತೆ.

ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ತನಗೆ ಅರಿವಿಲ್ಲದೆಯೇ ತನ್ನ ಕಣ್ಣಿಂದ ಧರಧರನೇ ನೀರು ಹರಿಯಿತು. ಖುಷಿಯಿಂದ ಜೋರಾಗಿ ಚಪ್ಪಾಳೆ ತಟ್ಟಿ, ಹೌದು,  ತಾನು ಸಲಿಂಗಕಾಮಿ. ನಿಮಗೆ ಏನಾದರೂ ಸಮಸ್ಯೆ ಇದೆಯೇ ? ಎಂದು ಜೋರಾಗಿ ಕೂಗಿದ್ದಾಗಿ ಜೋಹಾರಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಜೋಹಾರಿ ತನ್ನ ಸಂಗಾತಿಯೊಂದಿಗಿನ ಸಂಬಂಧದ ಬಗ್ಗೆ ಕೂಡ ಮಾತನಾಡಿದ್ದಾರೆ.

ಜೋಹಾರಿ ಮಾತನ್ನು ಕೇಳಿದ ಥಿಯೇಟರ್‌ನಲ್ಲಿದ್ದ ಎಲ್ಲರೂ ಒಮ್ಮತದಿಂದ ಚಪ್ಪಾಳೆ ತಟ್ಟಿದರಂತೆ. ಇದನ್ನು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಈ ಪೋಸ್ಟ್ ಭಾರಿ ವೈರಲ್ ಆಗಿದೆ. ಜೋಹಾರಿ ಅವರ ಈ ಸಾಹಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬದಾಯಿ ದೋ ಸಿನಿಮಾದಲ್ಲಿ ರಾಜ್‌ಕುಮಾರ್ ಪೊಲೀಸ್ ಪಾತ್ರದಲ್ಲಿ ನಟಿಸಿದ್ದರೆ, ಭೂಮಿ ದೈಹಿಕ ಶಿಕ್ಷಕಿ ಪಾತ್ರದಲ್ಲಿ ನಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...