alex Certify ತನ್ನನ್ನು ತಾನೇ ಮದುವೆಯಾಗಿ ಸುದ್ದಿಯಾಗಿದ್ದ ಕ್ಷಮಾರಿಂದ ಮೊದಲ ಕರ್ವಾಚೌತ್ ಆಚರಣೆ….​! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನನ್ನು ತಾನೇ ಮದುವೆಯಾಗಿ ಸುದ್ದಿಯಾಗಿದ್ದ ಕ್ಷಮಾರಿಂದ ಮೊದಲ ಕರ್ವಾಚೌತ್ ಆಚರಣೆ….​!

Maine jab khudko aaine me dekha': Kshama Bindu, Gujarat woman who married herself, observes first Karwa Chauthವಡೋದರಾ (ಗುಜರಾತ್​): ತನ್ನನ್ನು ತಾನೇ ಮದುವೆಯಾಗುವುದಾಗಿ ದೇಶಾದ್ಯಂತ ಭಾರಿ ಸುದ್ದಿ ಮಾಡಿದ್ದ ಗುಜರಾತ್​ನ ವಡೋದರಾದ ಕ್ಷಮಾ ಬಿಂದು (24) ಈಗ ಮೊದಲ ಕರ್ವಾಚೌತ್​ ಆಚರಿಸಿಕೊಂಡಿದ್ದಾರೆ.

ಕಳೆದ ಜೂನ್​ ತಿಂಗಳಿನಲ್ಲಿ ಸ್ವಯಂ ಮದುವೆಯಾಗುವ ಮೂಲಕ ‘ದಾಂಪತ್ಯ’ ಜೀವನಕ್ಕೆ ಕಾಲಿರಿಸಿದ್ದ ಕ್ಷಮಾ, ಸುಮಂಗಲಿಯರಂತೆ ಕರ್ವಾಚೌತ್​ ಆಚರಿಸಿಕೊಂಡಿದ್ದಾರೆ. ಈ ಕುರಿತು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ವಧುವಿನಂತೆ ಶೃಂಗರಿಸಿಕೊಂಡಿರುವ ಅವರು, ಜರಡಿಯ ಮೂಲಕ ಸೂರ್ಯನನ್ನು ನೋಡುತ್ತಿರುವ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.

‘ಇದು ನನ್ನ ಮೊದಲ ಕರ್ವಾಚೌತ್​. ನನ್ನನ್ನು ನಾನು ಮೊದಲ ಬಾರಿ ಕನ್ನಡಿಯಲ್ಲಿ ನೋಡಿಕೊಂಡಾಗ, ಕಳೆದುಹೋದ ನನ್ನ ಗೌರವ ಅದರಲ್ಲಿ ಕಾಣಿಸಿತು. ಕರ್ವಾಚೌತ್​ ಶುಭಾಶಯಗಳು’ ಎಂದು ಇನ್​ಸ್ಟಾಗ್ರಾಂನಲ್ಲಿ ಕ್ಷಮಾ ಬರೆದುಕೊಂಡಿದ್ದಾರೆ.

ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಕ್ಷಮಾ, ತನ್ನನ್ನು ತಾನೇ ಮದುವೆಯಾದವರು ಈ ದೇಶದಲ್ಲಿ ಯಾರಾದರೂ ಇದ್ದಾರೆಯೇ ಎಂದು ಹುಡುಕಿದ್ದರು. ಯಾರೂ ಇಂಥವರು ಸಿಗದ ಕಾರಣ, ದಾಖಲೆ ಮಾಡಲು ಬಯಸಿದ ಅವರು, ಖುದ್ದು ಮದುವೆಯಾಗಿ ಭಾರಿ ಸುದ್ದಿ ಮಾಡಿದ್ದರು. ‘ನಾನು ನನ್ನನ್ನು ಪ್ರೀತಿಸುತ್ತೇನೆ, ಆದ್ದರಿಂದ ನಾನು ನನ್ನನ್ನೇ ಮದುವೆಯಾಗುತ್ತಿದ್ದೇನೆ’ ಎಂದಿದ್ದರು ಕ್ಷಮಾ. ಅಂದಹಾಗೆ, ಇವರು ಸಮಾಜಶಾಸ್ತ್ರದಲ್ಲಿ ಪದವೀಧರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...