alex Certify ಹೆಂಡತಿ ಮಕ್ಕಳ ಮುಂದೆಯೇ ಹಾಡಹಗಲೇ ಪತ್ರಕರ್ತನ ಬರ್ಬರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಂಡತಿ ಮಕ್ಕಳ ಮುಂದೆಯೇ ಹಾಡಹಗಲೇ ಪತ್ರಕರ್ತನ ಬರ್ಬರ ಹತ್ಯೆ

ಪತ್ರಕರ್ತರೊಬ್ಬರನ್ನು ಹಾಡಹಗಲೇ ಅವರ ಹೆಂಡತಿ ಹಾಗೂ ಮಕ್ಕಳ ಮುಂದೆ ಭೀಕರವಾಗಿ ಕೊಲೆಗೈದಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ. ವಾರಪತ್ರಿಕೆಯೊಂದರಲ್ಲಿ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದ ಸೂರತ್ ಮೂಲದ 37 ವರ್ಷದ ಜುನೇದ್ ಖಾನ್ ಪಠಾಣ್ ಮೃತ ದುರ್ದೈವಿ.

ಜುನೇದ್ ಅವರನ್ನು ಹಾಡಹಗಲೇ ಅವರ ಪತ್ನಿ ಮತ್ತು ಮೂವರು ಪುತ್ರಿಯರ ಎದುರೇ ಹತ್ಯೆಗೈಯ್ಯಲಾಗಿದೆ. ನಾಲ್ಕು ಜನ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಅವರು ಮೊದಲು ಜುನೇದ್ ಅವರ ಮೋಟಾರ್ ಸೈಕಲ್‌ಗೆ ಕಾರು ಡಿಕ್ಕಿ ಹೊಡೆಸಿ, ನಂತರ ಚಾಕುವಿನಿಂದ ಇರಿದಿದ್ದಾರೆ.

ಅಫ್ಘಾನಿಸ್ತಾನದ ಈ ಪ್ರಾಂತ್ಯದಲ್ಲಿ ಕಳೆದ 20 ವರ್ಷಗಳಿಂದ ಹೈಸ್ಕೂಲ್‌ ಪೂರ್ಣಗೊಳಿಸಿದವರೇ ಇಲ್ಲ….!

ಜುನೇದ್ ಅವರು ತಮ್ಮ ಪತ್ನಿ, ಹತ್ತು, ನಾಲ್ಕು ಮತ್ತು ಎರಡೂವರೆ ವರ್ಷದ ಮೂವರು ಪುತ್ರಿಯರೊಂದಿಗೆ ಶಹಪೋರ್ ವಾಡ್‌ ನಲ್ಲಿರುವ ಸಂಬಂಧಿಕರನ್ನು ಭೇಟಿಯಾಗಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ‌.

ಜುನೇದ್ ಅವರು ಜನನಿಬಿಡ ಜಿಲಾನಿ ಸೇತುವೆಯನ್ನು ದಾಟುತ್ತಿದ್ದಾಗ ಹಿಂಬದಿಯಿಂದ ಬಂದ ಕಾರೊಂದು ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ನಲ್ಲಿದ್ದ ಎಲ್ಲರೂ ರಸ್ತೆಗೆ ಬಿದ್ದಿದ್ದಾರೆ. ತಕ್ಷಣ ಕಾರಿನಿಂದ ಕೆಳಗಿಳಿದ ನಾಲ್ವರು ಪಠಾಣ್ ಅವರ ಬೆನ್ನಿಗೆ ಚಾಕುವಿನಿಂದ ಇರಿದಿದ್ದಾರೆ. ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...