alex Certify ಗುಜರಾತ್ ರೈತನ ಯಶೋಗಾಥೆ: ಈ ಸಾವಯವ ಕೃಷಿಕನ ವಾರ್ಷಿಕ ಆದಾಯ ಎಷ್ಟು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಜರಾತ್ ರೈತನ ಯಶೋಗಾಥೆ: ಈ ಸಾವಯವ ಕೃಷಿಕನ ವಾರ್ಷಿಕ ಆದಾಯ ಎಷ್ಟು ಗೊತ್ತಾ..?

Gujarat Farmer's Unique Marketing Idea for Organic Produce Attracts Many

ಸೌರಾಷ್ಟ್ರ: ಸಾವಯವ ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ಈ ಕೃಷಿಕನ ವಾರ್ಷಿಕ ಆದಾಯ ಎಷ್ಟು ಗೊತ್ತಾ..? ಬರೋಬ್ಬರಿ 2 ಕೋಟಿ ರೂ.ಗಳು. ಗುಜರಾತ್ ನ ಸೌರಾಷ್ಟ್ರದ ಹಳ್ಳಿಯೊಂದರ ಕೃಷಿಕನ ಯಶೋಗಾಥೆಯಿದು.

ಕೈಕೆಸರಾದರೆ ಬಾಯಿ ಮೊಸರು ಅನ್ನೋ ಗಾದೆಯಂತೆ, ಪುರುಷೋತ್ತಮ ಸಿದ್ದಪಾರ ಎಂಬುವವರು ತಮ್ಮ ತಂದೆಯಿಂದ ಅನುವಂಶಿಕವಾಗಿ ಬಂದ ಹೊಲದಲ್ಲಿ ಮೈ ಮುರಿದು ದುಡಿದಿದ್ದಾರೆ. 18ನೇ ವಯಸ್ಸಿನಲ್ಲೇ ಕೃಷಿ ಕಾರ್ಯ ಮಾಡಿದ ಇವರಿಗೆ ಇಂದು ವಯಸ್ಸು 50 ಆಗಿದ್ದು, ತಮ್ಮ ಕೃಷಿಯನ್ನು ಮತ್ತಷ್ಟು ವಿಸ್ತರಿಸಿದ್ದಾರೆ.

ಪುರುಷೋತ್ತಮ ಅವರು ಇಂದು ತಾವು ಬೆಳೆದ ಬೆಳೆಯನ್ನು ದೇಶ ಮಾತ್ರವಲ್ಲದೆ ಅಮೆರಿಕ, ಯುಕೆ, ನಾರ್ವೆ, ಜರ್ಮನಿ, ದುಬೈ ಹಾಗೂ ಇಥಿಯೋಪಿಯಾ ಸೇರಿದಂತೆ ಹಲವು ದೇಶಗಳಿಗೆ ಮಾರಾಟ ಮಾಡಿದ್ದಾರೆ.

ಸ್ವಾವಲಂಬಿ ಕೃಷಿಕ ಪುರುಷೋತ್ತಮ ಸಿದ್ದಪಾರ ಅವರು ತಮ್ಮ ಚಿಕ್ಕ ವಯಸ್ಸಿನಿಂದಲೂ ಕೃಷಿ ಕ್ಷೇತ್ರದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಜೊತೆಗೆ ಕೃಷಿಯ ಸಾವಯವ ವಿಧಾನದ ಬಗ್ಗೆ ಕಲಿತು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡರು. ಇದರಿಂದ ತಮ್ಮ ಬೆಳೆಗಳ ಗುಣಮಟ್ಟದ ಮತ್ತು ಘಟಕದ ಜೊತೆ ಮಾರ್ಕೆಂಟಿಗ್ ತಂತ್ರಗಾರಿಕೆಯನ್ನೂ ಕಲಿತರು. ಇಂದಿನ ಡಿಜಿಟಲ್ ಯುಗದಲ್ಲಿ ಮೇಲೆ ಬರಲು ತುಂಬಾ ಕಷ್ಟಕರವಾದ ಆನ್ ಲೈನ್ ಮಾರ್ಕೆಟಿಂಗ್ ಗೆ ತಾನೆಂದಿಗೂ ಒಂದು ಪೈಸೆಯೂ ಖರ್ಚು ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ನಮ್ಮ ದೇಶದಲ್ಲಿ ಅತಿಥಿ ದೇವೋಭವ ಅನ್ನೋ ಮಾತಿದೆ. ಇದನ್ನು ಸಿದ್ದಪಾರ ಅವರು ಗಂಭೀರವಾಗಿ ಪರಿಗಣಿಸಿದರು. ಗ್ರಾಹಕರು ಹಾಗೂ ವಿತರಕರನ್ನು ತಮ್ಮ ಜಮೀನಿಗೆ ಕರೆಸಿಕೊಳ್ಳುವ ಇವರು, ಸ್ವಲ್ಪ ಸಮಯದವರೆಗೆ ಉಳಿದುಕೊಳ್ಳುವ ಅವಕಾಶವನ್ನೂ ನೀಡುತ್ತಾರೆ. ಅಲ್ಲದೆ ತನ್ನ ಜಮೀನಿಗೆ ಅವರನ್ನು ಕರೆದುಕೊಂಡು ಹೋಗಿ ಕೃಷಿ ಬೆಳೆಗಳನ್ನು ತೋರಿಸುತ್ತಾರೆ. ಜೊತೆಗೆ ತಮ್ಮ ಭೂಮಿಯಲ್ಲಿ ಬೆಳೆದ ಧಾನ್ಯದಿಂದಲೇ ಬಂದವರಿಗೆ ಹೊಟ್ಟೆ ತುಂಬಿಸುತ್ತಾರೆ. ಬಂದವರು ಸಿದ್ದಪಾರ ಬೆಳೆದ ಬೆಳೆಗಳನ್ನು ಇಷ್ಟಪಟ್ಟಲ್ಲಿ ಫೋನ್ ನಂಬರ್ ವಿನಿಮಯ ಮಾಡಿಕೊಳ್ಳುತ್ತಾರೆ. ಬಳಿಕ ಬೆಳೆ ಕೊಯ್ಲಿನ ಬಗ್ಗೆ ನಿಯಮಿತವಾಗಿ ತಮ್ಮ ವಾಟ್ಸಾಪ್ ನಲ್ಲಿ ಸಿದ್ದಪಾರ ಅವರು ಮಾಹಿತಿ ನೀಡುತ್ತಾರೆ. ಇದರಿಂದ ಬಂದವರಲ್ಲಿ ನಂಬಿಕೆ ಹಾಗೂ ನಿಷ್ಠೆಯನ್ನು ಪಡೆಯಲು ಸಹಾಯವಾಗುತ್ತದೆ ಎನ್ನುತ್ತಾರೆ ಪುರುಷೋತ್ತಮ ಸಿದ್ದಪಾರ.

ನಿಂಬೆ ಪಾನಕ ಮಿಶ್ರಿತ ಮದ್ಯ ಸೇವಿಸಿದ ಯುವತಿಗೆ ಏನಾಯ್ತು ಗೊತ್ತಾ….?

ಸಿದ್ದಾಪಾರ ಹೇಳುವ ಪ್ರಕಾರ, ಜುನಾಗಡದ ಜಮಕಾ ಗ್ರಾಮದಲ್ಲಿ 1999 ರವರೆಗೆ ಬರವು ಒಂದು ದೊಡ್ಡ ಸವಾಲಾಗಿತ್ತು. ಗ್ರಾಮಸ್ಥರು ಒಟ್ಟಾಗಿ ಹಣವನ್ನು ಸಂಗ್ರಹಿಸಲು ಮತ್ತು ಮಳೆನೀರನ್ನು ಸಂರಕ್ಷಿಸಲು ಸಣ್ಣ ಅಣೆಕಟ್ಟುಗಳು ಮತ್ತು ಜಲಾಶಯಗಳನ್ನು ನಿರ್ಮಿಸಲು ನಿರ್ಧರಿಸಿದರು. ಇದು ಒಂದು ಪ್ರಮುಖ ಯಶಸ್ಸಾಗಿ ಪರಿಣಮಿಸಿತು. ಇದನ್ನು ಅರಿತ ಗುಜರಾತ್ ಸರ್ಕಾರವು ನಮ್ಮ ಮಾದರಿಯನ್ನು ಇತರ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಅಳವಡಿಸಲು ನಿರ್ಧರಿಸಿತು. ಇನ್ನು ಫಲಿತಾಂಶಗಳನ್ನು ಅಧ್ಯಯನ ಮಾಡಲು ತಜ್ಞರು, ವಿದ್ಯಾರ್ಥಿಗಳು, ಕಾರ್ಯಕರ್ತರು ಮತ್ತು ಮಾಧ್ಯಮ ಸದಸ್ಯರು ನಮ್ಮ ಹಳ್ಳಿಯಲ್ಲಿ ಸುಮಾರು ಒಂದು ವರ್ಷ ಕಾಲ ಇದ್ದರು ಎಂದು ಹೇಳಿದ್ದಾರೆ.

ಸಿದ್ದಪಾರ ಅವರ ತಂದೆ ಕೃಷಿಯಲ್ಲಿ ರಾಸಾಯನಿಕ ಹಾಗೂ ಹಸುವಿನ ಸಗಣಿಯನ್ನು ಬಳಸುತ್ತಿದ್ದರಂತೆ. ಆದರೆ ಇವರಿಗೆ ಮಾತ್ರ ರಾಸಾಯನಿಕಗಳನ್ನು ಬಳಸಿ ಕೃಷಿ ಮಾಡುವುದು ಇಷ್ಟವಿರಲಿಲ್ಲ. ಹೀಗಾಗಿ ಸಾವಯವ ಕೃಷಿಗೆ ಹೆಚ್ಚಿನ ಒತ್ತನ್ನು ನೀಡಿದರು. ಹೀಗಾಗಿ ಗ್ರಾಹಕರು ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸುತ್ತಾರೆ ಎಂದು ಪುರುಷೋತ್ತಮ ಸಿದ್ದಪಾರ ಹೇಳಿದ್ದಾರೆ. ಮೊದಲಿಗೆ ಲಾಭಾಂಶವು ಅತ್ಯಲ್ಪವಾಗಿತ್ತು. ಆದರೆ ಇಂದು ಎಲ್ಲರನ್ನೂ ಬೆರಗಾಗಿಸುವಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ ಈ ಮಾದರಿ ರೈತ.

ಇನ್ನು ಸಿದ್ದಪಾರ ಅವರು ತಮ್ಮ ಭೂಮಿಯಲ್ಲಿ ಅರಣ್ಯ ಮಾದರಿಯನ್ನು ಮರುಸೃಷ್ಟಿಸಿದ್ದಾರೆ. ಅವರ ಕೃಷಿ ಶೈಲಿಯ ಮುಖ್ಯ ಅಂಶವೆಂದರೆ ಮಣ್ಣಿನ ಪುಷ್ಠೀಕರಣ ಹಾಗೂ ಸಸ್ಯಗಳ ಸ್ವತಂತ್ರ ಬೆಳವಣಿಗೆಗೆ ಪೂರಕವಾಗಿದೆ. ಒಣ ಎಲೆಗಳು, ಗೋಧಿ ಸಿಪ್ಪೆಯನ್ನು ಸುಡುವ ಬದಲು ಹಸುವಿನ ಸಗಣಿ, ಬೆಲ್ಲ, ಮಜ್ಜಿಗೆ ಹಾಗೂ ಅಕ್ಕಿಯ ನೀರನ್ನು ಬಳಸಿ ಸಾವಯವ ಗೊಬ್ಬರ ತಯಾರಿಸಿದ್ದಾರೆ. ಇದು ಭೂಮಿ ತಂಪಾಗಿಡುವಲ್ಲಿ ಸಹಾಯ ಮಾಡುತ್ತದೆ ಎಂದು ಸಿದ್ದಪಾರ ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...