alex Certify ಪೆಟ್ರೋಲ್​-ವಿದ್ಯುತ್​ಗಳರೆಡರಲ್ಲೂ ಚಲಿಸಬಲ್ಲ ಬೈಕ್​ ಆವಿಷ್ಕರಿಸಿದ ವಿದ್ಯಾರ್ಥಿಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೆಟ್ರೋಲ್​-ವಿದ್ಯುತ್​ಗಳರೆಡರಲ್ಲೂ ಚಲಿಸಬಲ್ಲ ಬೈಕ್​ ಆವಿಷ್ಕರಿಸಿದ ವಿದ್ಯಾರ್ಥಿಗಳು..!

ದೇಶದಲ್ಲಿ ಪೆಟ್ರೋಲ್​ ಬೆಲೆ ಗಗನಕ್ಕೇರುತ್ತಿದ್ದಂತೆಯೇ ಅನೇಕರು ವಾಹನಗಳನ್ನ ಚಲಾಯಿಸೋದನ್ನೇ ಬಿಡ್ತಿದ್ದಾರೆ. ಪದೇ ಪದೇ ಗ್ರಾಹಕನ ಜೇಬಿಗೆ ಕತ್ತರಿ ಬೀಳುತ್ತಲೇ ಇರೋದ್ರಿಂದ ಈ ರೀತಿ ಮಾಡೋದು ಅನಿವಾರ್ಯ ಕೂಡ ಆಗಿದೆ.

ಆದರೆ ವಾಹನ ಸವಾರರ ಈ ಕಷ್ಟವನ್ನ ಅರಿತ ಗುಜರಾತ್​ ರಾಜಕೋಟ್​​ ವಿವಿಪಿ ಇಂಜಿನಿಯರಿಂಗ್​ ಕಾಲೇಜು ವಿದ್ಯಾರ್ಥಿಗಳು ಪೆಟ್ರೋಲ್​ ಹಾಗೂ ವಿದ್ಯುತ್​ಗಳೆರಡರ ಸಹಾಯದಿಂದಲೂ ಓಡಬಲ್ಲ ಮೋಟಾರ್​ ಬೈಕ್​ನ್ನು ಕಂಡು ಹಿಡಿದಿದ್ದಾರೆ.

ಯಾವ ಇಂಧನದ ಆಧಾರದ ಮೇಲೆ ಬೈಕ್​ ಚಲಾಯಿಸಬೇಕು ಅನ್ನೋದನ್ನ ನಿರ್ಧರಿಸಲು ವಾಹನ ಹ್ಯಾಂಡಲ್ ​ಬಾರ್​ನಲ್ಲಿರುವ ಸ್ವಿಚ್​ನ್ನು ಒತ್ತಿದರೆ ಸಾಕಾಗುತ್ತೆ. ಹೈಬ್ರಿಡ್​ ಮಾಡೆಲ್​ನಲ್ಲಿ ತಯಾರಾಗಿರುವ ಈ ಬೈಕ್​​ನ ಒಳಗೆ ಇಂಜಿನ್​ನ್ನು ಕೂರಿಸಲಾಗಿದೆ.

ಸಂಪೂರ್ಣ ಚಾರ್ಜ್​ ಆದ ಬಳಿಕ ಈ ಬೈಕ್​​ ಪ್ರತಿ ಗಂಟೆಗೆ 40 ಕಿಲೋಮೀಟರ್​ ವೇಗದಲ್ಲಿ ಸಾಗಲಿದೆ. ಪ್ರತಿ ಯುನಿಟ್​​ಗೆ ವಾಹನ ಸವಾರನಿಗೆ 17 ಪೈಸೆ ಖರ್ಚು ಆಗಲಿದೆ ಎಂದು ಕಾಲೇಜಿನ ಮೆಕಾನಿಕಲ್​ ವಿಭಾಗದ ಡೀನ್​ ಡಾ. ಮಣಿಯರ್​ ಮಾಹಿತಿ ನೀಡಿದ್ರು.

ಇದೇ ರೀತಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ 10 ವಿದ್ಯಾರ್ಥಿಗಳು ಸೇರಿ ಎಲೆಕ್ಟ್ರಿಕ್​ ಬೈಕ್​ ಕಂಡು ಹಿಡಿದಿದ್ದಾರೆ. ಈ ಬೈಕ್​ನ್ನು ಒಂದು ಬಾರಿ ಚಾರ್ಜ್​ ಮಾಡಿದರೆ 40 ಕಿಲೋಮೀಟರ್​ವರೆಗೆ ಸಾಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...