alex Certify ಸ್ಪೇನಿನಲ್ಲಿದ್ದಾರೆ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಪೇನಿನಲ್ಲಿದ್ದಾರೆ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ…!

ಸ್ಪೇನಿನ ಸ್ಯಾಟರ್ನಿನೋ ಡೆ ಲಾ ಫ್ಯೂಂಟೆ ಗಾರ್ಸಿಯಾ ಅವರಿಗೆ 112 ವರ್ಷ ಮತ್ತು 211 ದಿನಗಳಾಗಿದ್ದು, ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿಯಾಗಿ ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ.

ಸ್ಯಾಟರ್ನಿನೋ 11 ಫೆಬ್ರವರಿ 1919ರಂದು ವಾಯುವ್ಯ ಸ್ಪೇನ್‌ನ ಲಿಯಾನ್‌ನ ಬಳಿ ಪುಯೆಂಟೆ ಕ್ಯಾಸ್ಟ್ರೊದಲ್ಲಿ ಜನಿಸಿದರು. ಆದರೆ, ಅವರು ಯಾವಾಗಲೂ ತಮ್ಮ ಜನ್ಮದಿನವನ್ನು ಫೆಬ್ರವರಿ 8 ರಂದು ಆಚರಿಸುತ್ತಾರೆ.

ಜಗತ್ತಿನ ಅತಿ ಕುಳ್ಳ ಗೋವು ಎಂಬ ಶ್ರೇಯಕ್ಕೆ ಭಾಜನಳಾದ ರಾಣಿ

4.92 ಅಡಿ ಎತ್ತರ ಇರುವ ಸ್ಯಾಟರ್ನಿನೊ, 1936 ರಲ್ಲಿ ಆರಂಭವಾದ ಸ್ಪ್ಯಾನಿಷ್ ಅಂತರ್ಯುದ್ಧದಲ್ಲಿ ಹೋರಾಡುವುದನ್ನು ತಪ್ಪಿಸಲು ಅವರ ಕಡಿಮೆ ಎತ್ತರವೇ ಕಾರಣ ಎಂದು ಹೇಳಿದ್ದಾರೆ. ಆ ಘರ್ಷಣೆಯ ಸಮಯದಲ್ಲಿ, ಅವರು ತಮ್ಮ ಪತ್ನಿಯೊಂದಿಗೆ ಶಾಂತ ಜೀವನವನ್ನು ನಡೆಸಿದರಂತೆ ಮತ್ತು ಶೂ ತಯಾರಕ ಕೆಲಸ ಮಾಡುತ್ತಿದ್ದರಂತೆ.

112 ವರ್ಷ ವಯಸ್ಸಿನ ಸ್ಯಾಟರ್ನಿನೊ ಒಬ್ಬ ಉತ್ಸಾಹಿ ಫುಟ್ಬಾಲ್ ಅಭಿಮಾನಿಯಾಗಿದ್ದಾರೆ. ಅವರು ಫುಟ್ಬಾಲ್ ಅನ್ನು ಹಲವು ವರ್ಷಗಳಿಂದ ಆಡಿದ್ದಾರೆ. ಹಾಗೂ ಸ್ಥಳೀಯ ತಂಡವಾದ ಪ್ಯುಂಟೆ ಕ್ಯಾಸ್ಟ್ರೋ ಸಹ ಸಹ ಸ್ಥಾಪಿಸಿದ್ದಾರೆ.

ವಯಸ್ಕರ ಈ ಐಸ್ ಕ್ರೀಂನಲ್ಲಿದೆ ನಶೆಯ ಗಮ್ಮತ್ತು…..!

ಇನ್ನು ಸ್ಯಾಟರ್ನಿನೋ ಮತ್ತು ಅವರ ಪತ್ನಿ ಆಂಟೋನಿನಾ ಬ್ಯಾರಿಯೊ ಗುಟೈರೆಜ್‌ಗೆ ಏಳು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದ. ಪುತ್ರ ಬಾಲ್ಯದಲ್ಲಿಯೇ ಇಹಲೋಕ ತ್ಯಜಿಸಿದ್ದಾನೆ. ಇಂದು, 112 ವರ್ಷದ ವೃದ್ಧನನ್ನು ಅವರ ಒಬ್ಬ ಮಗಳು ಮತ್ತು ಅಳಿಯ ನೋಡಿಕೊಳ್ಳುತ್ತಿದ್ದಾರೆ. ಸ್ಯಾಟರ್ನಿನೋ ಅವರ ಕುಟುಂಬವು ದೊಡ್ಡದಾಗಿದೆ. ಇದರಲ್ಲಿ 14 ಮೊಮ್ಮಕ್ಕಳು ಮತ್ತು 22 ಮರಿಮೊಮ್ಮಕ್ಕಳು ಇದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...