alex Certify ವೀಕೆಂಡ್ ಕರ್ಫ್ಯೂ, ಅರ್ಧ ಸಿಬ್ಬಂದಿ ಕೆಲಸ, ಸಮಾರಂಭಗಳಿಗೆ ನಿರ್ಬಂಧ, ಬೆಂಗಳೂರಲ್ಲಿ ಶಾಲೆಗಳಿಗೆ ರಜೆ ಸೇರಿ ಕೊರೋನಾ ತಡೆಗೆ ಹೊಸ ಮಾರ್ಗಸೂಚಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೀಕೆಂಡ್ ಕರ್ಫ್ಯೂ, ಅರ್ಧ ಸಿಬ್ಬಂದಿ ಕೆಲಸ, ಸಮಾರಂಭಗಳಿಗೆ ನಿರ್ಬಂಧ, ಬೆಂಗಳೂರಲ್ಲಿ ಶಾಲೆಗಳಿಗೆ ರಜೆ ಸೇರಿ ಕೊರೋನಾ ತಡೆಗೆ ಹೊಸ ಮಾರ್ಗಸೂಚಿ

ಬೆಂಗಳೂರು: ಕೊರೋನಾ ಸೋಂಕು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ಜೊತೆಗೆ ವೀಕೆಂಡ್ ಕರ್ಫ್ಯೂ ಜಾರಿ ಸೇರಿ ಹಲವು ಕ್ರಮಕೈಗೊಳ್ಳಲಾಗಿದ್ದು, ಇಂದು ರಾತ್ರಿಯಿಂದಲೇ ಹೊಸ ನಿಯಮ ಜಾರಿಗೆ ಬರಲಿದೆ. ಎರಡು ವಾರಗಳಿಗೆ ನಿರ್ಬಂಧ ಅನ್ವಯವಾಗಲಿದೆ.

ರಾಜ್ಯದಲ್ಲಿ ಇರುವ ನೈಟ್ ಕರ್ಫ್ಯೂ ಜೊತೆಗೆ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೆ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ.

ಗುರುವಾರದಿಂದ ಬೆಂಗಳೂರಿನಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. 10 ಮತ್ತು 12ನೇ ತರಗತಿ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ಕಾಲೇಜುಗಳು ನಡೆಯಲಿವೆ.

ಸರ್ಕಾರಿ ಕಚೇರಿಗಳಲ್ಲಿ 50:50 ಸಿಬ್ಬಂದಿಗೆ ಅವಕಾಶ ನೀಡಲಾಗಿದೆ.

ಮದುವೆ ಸೇರಿ ಎಲ್ಲಾ ಸಭೆ, ಸಮಾರಂಭಗಳಿಗೆ ಗರಿಷ್ಠ ಮಿತಿ ನಿಗದಿ ಮಾಡಲಾಗಿದೆ. ಹೊರಾಂಗಣದಲ್ಲಿ 200 ಜನ, ಮತ್ತು ಒಳಾಂಗಣದಲ್ಲಿ 100 ಜನರಿಗೆ ಸೀಟಿಂಗ್ ಇದೆ. ಎರಡು ಡೋಸ್ ಪಡೆದವರು ಮಾತ್ರ ಭಾಗವಹಿಸಬೇಕು.

ಜಾತ್ರೆ, ಪ್ರತಿಭಟನೆ, ರ್ಯಾಲಿ, ಪ್ರಚಾರ ಸಭೆಗಳಿಗೆ ಅವಕಾಶ ಇರುವುದಿಲ್ಲ.

ಹೋಟೆಲ್, ಪಬ್, ಬಾರ್, ಜಿಮ್, ಥಿಯೇಟರ್ ಗಳಲ್ಲಿ ಶೇಕಡ 50 ರಷ್ಟು ಸೀಟಿಂಗ್

ಹೊರರಾಜ್ಯದಿಂದ ಬರುವವರೆಗೆ ಆರ್.ಟಿ. ಪಿಸಿಆರ್ ನೆಗೆಟಿವ್ ಕಡ್ಡಾಯವಾಗಿರುತ್ತದೆ.

ಬೆಂಗಳೂರಿನಲ್ಲಿ ಒಂದರಿಂದ 9ನೇ ತರಗತಿವರೆಗೆ ಶಾಲೆಗೆ ರಜೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...