alex Certify BREAKING NEWS : ಉಚಿತ ವಿದ್ಯುತ್ ಪಡೆಯುವ ‘ಗೃಹ ಜ್ಯೋತಿ’ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರತ್ಯೇಕ ಲಿಂಕ್ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS : ಉಚಿತ ವಿದ್ಯುತ್ ಪಡೆಯುವ ‘ಗೃಹ ಜ್ಯೋತಿ’ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರತ್ಯೇಕ ಲಿಂಕ್ ಬಿಡುಗಡೆ

ಬೆಂಗಳೂರು: ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರ ಹೊಸ ಲಿಂ‍ಕ್ ಪರಿಚಯ ಮಾಡಿದೆ. ಒಂದೇ ಒಂದು ನಿಮಿಷದಲ್ಲಿ ಗ್ರಾಹಕರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಿಗೆ ಸೇವಾ ಸಿಂಧು ಪೋರ್ಟಲ್ ನಡಿಯಲ್ಲಿ ವಿದ್ಯುತ್ ಗ್ರಾಹಕರು ಗೃಹ ಜ್ಯೋತಿಯೋಜನೆಗೆ ನೋಂದಣಿ ಮಾಡಲು ಪ್ರತ್ಯೇ ಕ ಲಿಂಕ್ ಅನ್ನು ರಿಲೀಸ್ ಮಾಡಿದೆ.

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ನೀವು https://sevasindhugs.karnataka.gov.in/gruhajyothi/renderApplicationForm.do?serviceId=19890005&UUID=5ffe9585-600b-44c2-b45f 4536f55a4d74&directService=true&tempId=8410&grievDefined=0&serviceLinkRequired=No&userLoggedIn=N&source=CTZN&OWASP_CSRFTOKEN=MQLF-BVL8-LJGM-3BHN-TFIY-S2AL-VH8S-Q24Q ಈ ಲಿಂಕ್ ಕ್ಲಿಕ್ ಮಾಡಿದ್ರೇ, ನೇರವಾಗಿ ಅರ್ಜಿಸಲ್ಲಿಸಲು ಅರ್ಜಿ ತೆರೆದುಕೊಳ್ಳಲಿದೆ. ಅಥವಾ https://sevasindhugs.karnataka.gov.in/about_kannada.html# ಲಿಂಕ್ ಕೂಡ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು

ಸೇವಾ ಸಿಂಧು ಪೋರ್ಟಲ್ ನಲ್ಲಿ ಗೃಹಜ್ಯೋತಿ ಯೋಜನೆಯಡಿ ಮೂರನೇ ದಿನವಾದ ಮಂಗಳವಾರ 3,85,481 ಅರ್ಜಿ ಸಲ್ಲಿಕೆಯಾಗಿವೆ.ಸರ್ವರ್ ಸಮಸ್ಯೆಯ ನಡುವೆಯೂ ಇದುವರೆಗೆ 8,16,631 ಅರ್ಜಿ ಸಲ್ಲಿಸಲಾಗಿದೆ. ಮೊದಲು ದಿನವಾದ ಜೂನ್ 18ರಂದು 96,305 ಮಂದಿ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಎರಡನೇ ದಿನ 3,34,845 ಅರ್ಜಿ ಸಲ್ಲಿಕೆಯಾಗಿವೆ.

ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ಆಯ್ದ ಎಸ್ಕಾಂ ಕಚೇರಿಗಳಲ್ಲಿ, ಲ್ಯಾಪ್ಟಾಪ್, ಮೊಬೈಲ್, ಕಂಪ್ಯೂಟರ್ ನಲ್ಲಿಯೂ ಸಾರ್ವಜನಿಕರು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ನೋಂದಣಿ ಪ್ರಕ್ರಿಯೆ ಸರಳವಾಗಿದ್ದು, ಸೇವಾ ಸಿಂಧು ಪೋರ್ಟಲ್ ನಲ್ಲಿ ಆಧಾರ್, ಮೊಬೈಲ್ ಸಂಖ್ಯೆ ಹಾಗೂ ಖಾತೆ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಸಿಕೊಳ್ಳಬಹುದು. ನೋಂದಣಿಗೆ ಕೊನೆ ದಿನ ಇರುವುದಿಲ್ಲ ಎನ್ನಲಾಗಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...