alex Certify ಹಾರನ್‌ ಸೌಂಡಿಗೆ ಯುವಕರಿಂದ ರಸ್ತೆ ಮಧ್ಯದಲ್ಲೇ ʼನಾಗಿನ್‌ʼ ಡಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರನ್‌ ಸೌಂಡಿಗೆ ಯುವಕರಿಂದ ರಸ್ತೆ ಮಧ್ಯದಲ್ಲೇ ʼನಾಗಿನ್‌ʼ ಡಾನ್ಸ್

ಒಳ್ಳೆಯ ಬೀಟ್ ಸಾಂಗ್, ಜೊತೆಗೆ ಗೆಳೆಯರ ಗುಂಪಿದ್ದರೆ ಕೇಳಬೇಕೆ, ಡ್ಯಾನ್ಸ್ ಮಾಡಲು ಸ್ಥಳ ಯಾವುದಾದರೂ ಸರಿಯೇ, ಮನಸ್ಸು ಬಿಚ್ಚಿ ಕುಣಿದು ಬಿಡುತ್ತವೆ ನಮ್ಮ ಹೈಕಳು.

ಈಗ ಅಂತಹ ಒಂದು ಕ್ರೇಜಿ ಡ್ಯಾನ್ಸ್ ವಿಡಿಯೊ ವೈರಲ್ ಆಗಿದ್ದು, ಟ್ರಕ್‌ ವೊಂದರ ಹಾರ್ನ್‌ನ ಮ್ಯೂಸಿಕ್ ತಮಗೆ ಕುಣಿಯಲು ಸಾಕು ಎಂದು ರಸ್ತೆಯ ಮಧ್ಯೆ ಕುಣಿದು ಕುಪ್ಪಳಿಸಿರುವುದನ್ನು ಅದರಲ್ಲಿ ನೋಡಬಹುದಾಗಿದೆ.

ವಿಡಿಯೊದಲ್ಲಿ ಹುಡುಗರ ಗುಂಪು ತಮ್ಮ ಬೈಕ್‌ಗಳನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿರುವುದು ಕಾಣಿಸುತ್ತದೆ. ದೊಡ್ಡ ದನಿಯ ನಾಗಿನ್ ನೃತ್ಯದ ಟ್ಯೂನ್‌ನ ಹಾರನ್ ಮಾಡಿಕೊಂಡು ಟ್ರಕ್ ರಸ್ತೆಯಲ್ಲಿ ಬರುತ್ತಿದ್ದಂತೆ ಹುಡುಗರು ಉತ್ಸಾಹದಿಂದ ಡ್ಯಾನ್ಸ್ ಮಾಡಲು ಪ್ರಾರಂಭಿಸುತ್ತಾರೆ. ಕೆಲವರು ಕುಣಿದು ಕುಪ್ಪಳಿಸುತ್ತಿದ್ದರೆ, ಕೆಲವರು ತೆವಳುತ್ತಾ ರಸ್ತೆಯಲ್ಲಿ ಹಾವಿನಂತೆ ಹೊರಳಾಡುತ್ತಾರೆ.‌

ಸಾಮಾಜಿಕ‌ ಜಾಲತಾಣದಲ್ಲಿ ಸಾಕಷ್ಟು ಬಳಕೆದಾರರು ಈ ವಿಡಿಯೋ ಹಂಚಿಕೊಂಡಿದ್ದು, ಈ ವಿಡಿಯೋ‌ದ ಮೇಲೆ ಚರ್ಚೆಯೂ ನಡೆದಿದೆ.

ಕೆಲವರು ಲಘುವಾಗಿ ತೆಗೆದುಕೊಂಡರೆ, ಕೆಲವರು ರಸ್ತೆಯಲ್ಲಿ ಇಂತಹ ಗಲಾಟೆ ಮಾಡಿದರೆ ಸಂಚಾರ ವ್ಯತ್ಯಯವಾಗಬಹುದು ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಗೆಳೆಯರೊಂದಿಗಿನ ತಮ್ಮ ಇಂಥದ್ದೇ ಹಳೆಯ ನೆನಪನ್ನು ಕೆದಕಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...