alex Certify OMG: ಮಟನ್‌ ಖಾದ್ಯ ತಯಾರಿಸಿಲ್ಲವೆಂಬ ಕಾರಣಕ್ಕೆ ರದ್ದಾಯ್ತು ಮದುವೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಮಟನ್‌ ಖಾದ್ಯ ತಯಾರಿಸಿಲ್ಲವೆಂಬ ಕಾರಣಕ್ಕೆ ರದ್ದಾಯ್ತು ಮದುವೆ…!

ಮದುವೆ ಕಾರ್ಯಕ್ರಮದಲ್ಲಿ ವಧುವಿನ ಕಡೆಯವರು ಮಟನ್​​ ಖಾದ್ಯ ತಯಾರಿಸಲಿಲ್ಲ ಎಂಬ ಕಾರಣಕ್ಕೆ ವರ ಮದುವೆಯನ್ನೇ ನಿರಾಕರಿಸಿದ ಘಟನೆ ಜೈಪುರದಲ್ಲಿ ನಡೆದಿದೆ. 27 ವರ್ಷದ ರಮಾಕಾಂತ್​​​ ಪಾತ್ರ ಎಂಬಾತ ಮದುವೆ ನಿಲ್ಲಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಇನ್ನೊಂದು ಯುವತಿಯನ್ನ ವರಿಸಿದ್ದಾನೆ.

ವರ ರಮಾಕಾಂತ್​​ ಮದುವೆ ದಿಬ್ಬಣ ಸಮೇತ ಬಂದಗಾಂವ್​ ಗ್ರಾಮಕ್ಕೆ ಬಂದಿದ್ದ. ವರನ ಕುಟುಂಬಸ್ಥರನ್ನ ಸ್ವಾಗತಿಸಿ ವಧುವಿನ ಕುಟುಂಬ ಬಳಿಕ ಇವರನ್ನ ಕಲ್ಯಾಣ ಮಂಟಪಕ್ಕೆ ಕರೆದೊಯ್ದಿತ್ತು. ಒಂದಷ್ಟು ಶಾಸ್ತ್ರಗಳನ್ನ ಮಾಡಿದ ನಂತರ ವರನ ಕುಟುಂಬಸ್ಥರು ಊಟದ ಹಾಲ್​ಗೆ ತೆರಳಿದ್ರು.

ಊಟ ಬಡಿಸುವ ಮುಂಚೆಯೇ ವರನ ಕುಟುಂಬಸ್ಥರು ಮಟನ್​ ಸಾರಿಗಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ ಅದನ್ನ ವಧುವಿನ ಕುಟುಂಬಸ್ಥರು ತಯಾರಿಸಿರಲಿಲ್ಲ. ಇಲ್ಲಿಂದ ಶುರುವಾದ ವಾದ – ವಿವಾದ ಬಳಿಕ ಮದುವೆ ನಿಲ್ಲಿಸುವವರೆಗೆ ಹೋಗಿದೆ.

ವಧುವಿನ ಕುಟುಂಬಸ್ಥರು ಮದುವೆಯನ್ನ ನಿಲ್ಲಿಸದಂತೆ ವರನ ಬಳಿ ಬೇಡಿಕೊಂಡಿದ್ದಾರೆ. ಆದರೆ ಇದಕ್ಕೆ ಜಗ್ಗದ ರಮಾಕಾಂತ್​ ತನ್ನ ಕುಟುಂಬಸ್ಥರ ಮನೆಗೆ ತೆರಳಿ ಒಂದು ರಾತ್ರಿ ಉಳಿದಿದ್ದಾನೆ. ಅಲ್ಲಿಂದ ತನ್ನ ಮನೆಗೆ ವಾಪಸ್ಸಾಗುವ ವೇಳೆಯಲ್ಲಿ ಇನ್ನೊಬ್ಬ ಯುವತಿಯನ್ನ ವರಿಸಿದ್ದಾನೆ. ಈ ಸಂಬಂಧ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...