alex Certify ವಾಹನ ವ್ಯವಸ್ಥೆ ಇಲ್ಲದೇ ರಾತ್ರಿಯಿಡೀ ನಡೆದುಕೊಂಡೇ ವಧುವಿನ ಮನೆ ತಲುಪಿದ ವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ವ್ಯವಸ್ಥೆ ಇಲ್ಲದೇ ರಾತ್ರಿಯಿಡೀ ನಡೆದುಕೊಂಡೇ ವಧುವಿನ ಮನೆ ತಲುಪಿದ ವರ

ಭುವನೇಶ್ವರ: ಚಾಲಕರ ಮುಷ್ಕರದಿಂದಾಗಿ ವಾಹನ ವ್ಯವಸ್ಥೆ ಮಾಡಲಾಗದೆ ಒಡಿಶಾದ ರಾಯಗಡ ಜಿಲ್ಲೆಯ ವಧುವಿನ ಗ್ರಾಮಕ್ಕೆ ವರ ಹಾಗೂ ಆತನ ಕುಟುಂಬಸ್ಥರು 28 ಕಿಲೋಮೀಟರ್ ನಡೆದುಕೊಂಡು ಹೋಗಬೇಕಾಯಿತು.

ಕಲ್ಯಾಣಸಿಂಗ್‌ ಪುರ ಬ್ಲಾಕ್‌ ನ ಸುನಖಂಡಿ ಪಂಚಾಯಿತಿಯಿಂದ ಗುರುವಾರ ರಾತ್ರಿಯಿಡೀ ನಡೆದುಕೊಂಡು ದಿಬಳಪಾಡು ಗ್ರಾಮಕ್ಕೆ ಆಗಮಿಸಿ ಅಲ್ಲಿ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೆಲವು ಮಹಿಳೆಯರು ಸೇರಿದಂತೆ ವರ ಮತ್ತು ಅವರ ಕುಟುಂಬ ಸದಸ್ಯರು ರಾತ್ರಿಯಲ್ಲಿ ನಡೆದುಕೊಂಡು ಹೋಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಚಾಲಕರ ಮುಷ್ಕರದಿಂದಾಗಿ ಯಾವುದೇ ಸಾರಿಗೆ ಲಭ್ಯವಿಲ್ಲ. ನಾವು ಹಳ್ಳಿಗೆ ತಲುಪಲು ರಾತ್ರಿಯಿಡೀ ನಡೆದಿದ್ದೇವೆ. ನಮಗೆ ಬೇರೆ ದಾರಿ ಇರಲಿಲ್ಲ ಎಂದು ವರನ ಕುಟುಂಬದ ಸದಸ್ಯರೊಬ್ಬರು ಹೇಳಿದರು.

ಶುಕ್ರವಾರ ಬೆಳಗ್ಗೆ ಮದುವೆ ನಿಶ್ಚಯವಾಗಿತ್ತು. ಆದರೆ ವರ ಮತ್ತು ಆತನ ಕುಟುಂಬಸ್ಥರು ವಧುವಿನ ಮನೆಯಲ್ಲಿಯೇ ಉಳಿದುಕೊಂಡಿದ್ದು, ಚಾಲಕರ ಸಂಘದವರು ಮುಷ್ಕರ ಹಿಂಪಡೆಯುತ್ತಾರೆ ಎಂದು ಕಾಯುತ್ತಿದ್ದರು.

ವಿಮೆ, ಪಿಂಚಣಿ, ಕಲ್ಯಾಣ ಮಂಡಳಿ ರಚನೆ ಮತ್ತಿತರ ಸಮಾಜ ಕಲ್ಯಾಣ ಕ್ರಮಗಳಿಗೆ ಆಗ್ರಹಿಸಿ ಚಾಲಕ ಏಕತಾ ಮಹಾಸಂಘ ಬುಧವಾರದಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...