alex Certify ಮದುವೆಯನ್ನು ಡಿಫರೆಂಟ್ ಆಗಿ ಮಾಡಲು ಶವಪೆಟ್ಟಿಗೆಯಲ್ಲಿ ವರನನ್ನು ತಂದ ಸ್ನೇಹಿತರು: ನೆಟ್ಟಿಗರು ಕಿಡಿ​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯನ್ನು ಡಿಫರೆಂಟ್ ಆಗಿ ಮಾಡಲು ಶವಪೆಟ್ಟಿಗೆಯಲ್ಲಿ ವರನನ್ನು ತಂದ ಸ್ನೇಹಿತರು: ನೆಟ್ಟಿಗರು ಕಿಡಿ​

ನ್ಯೂಯಾರ್ಕ್​: ಮದುವೆಯನ್ನು ಡಿಫರೆಂಟ್​ ಆಗಿ ಆಚರಿಸಿಕೊಳ್ಳಬೇಕು ಎಂದು ಕೆಲವರಿಗೆ ಆಸೆ ಇರುವುದು ನಿಜ. ಹಾಗೆಂದು ಇಲ್ಲೊಂದು ವಿಲಕ್ಷಣ ಘಟನೆ ನಡೆದಿದ್ದು, ನೆಟ್ಟಿಗರಿಂದ ಭಾರಿ ಅಸಮಾಧಾನ ಉಂಟಾಗಿದೆ. ಅದೇನೆಂದರೆ, ವರನ ಸ್ನೇಹಿತರು ಆತನನ್ನು ಶವಪೆಟ್ಟಿಗೆಯಲ್ಲಿ ತುಂಬಿಸಿ ಮದುವೆ ಮನೆಗೆ ಕರೆತಂದಿದ್ದಾರೆ!

ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಈ ವಿಡಿಯೋದಲ್ಲಿ ನಾಲ್ವರು ಹುಡುಗರು ಹಾಗೂ ಇಬ್ಬರು ಹುಡುಗಿಯರು ಕಾರಿನಿಂದ ಶವಪೆಟ್ಟಿಗೆಯನ್ನು ಇಳಿಸಿ ಕರೆದುಕೊಂಡು ಹೋಗುತ್ತಿರುವ ದೃಶ್ಯವಿದೆ.

ಆದರೆ ಎಲ್ಲೂ ವಧುವಾಗಲಿ ವರನಾಗಲಿ ವಿಡಿಯೋದಲ್ಲಿ ಕಾಣಿಸುತ್ತಿಲ್ಲ. ಅಲ್ಲದೇ ವಧು ವರರ ಪ್ರತಿಕ್ರಿಯೆ ವಿಡಿಯೋದಲ್ಲಿಲ್ಲ. ಮದುವೆ ಮನೆಗೆ ಶವಪೆಟ್ಟಿಗೆ ಆಗಮಿಸುತ್ತಿದ್ದಂತೆ ಅಲ್ಲಿದ್ದವರು ಗಾಬರಿಯಿಂದ ನೋಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆ ಆಗಿದೆ.

ಈ ವಿಡಿಯೋವನ್ನು ಮೂಲತಃ ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಮದುವೆ ಎನ್ನುವುದು ಪವಿತ್ರ ಬಂಧನವಾಗಿದ್ದು, ಶವ ಪೆಟ್ಟಿಗೆಯಲ್ಲಿ ಕರೆತಂದಿರುವುದು ಎಷ್ಟು ಸರಿ ಎಂದು ಹಲವರು ಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...