alex Certify ಹಾರ ವಿನಿಮಯದ ಬಳಿಕ‌ ಮದುವೆ ಬೇಡವೆಂದು ಓಟ ಕಿತ್ತ ವರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರ ವಿನಿಮಯದ ಬಳಿಕ‌ ಮದುವೆ ಬೇಡವೆಂದು ಓಟ ಕಿತ್ತ ವರ….!

ವಧುವಿಗೆ ಮಂಟಪದಲ್ಲಿ ಮಾಲೆ ಹಾಕಿದ ಬಳಿಕ ವರ ತನ್ನ ನಿರ್ಧಾರದಿಂದ ಹಿಂದೆ ಸರಿದು ವಿವಾಹ‌ ಮುರಿದ ಪ್ರಸಂಗ ಬಿಹಾರದ ಮೋತಿಹಾರಿಯಲ್ಲಿ ನಡೆದಿದೆ.

ಆತ ಬೇರೆ ಯುವತಿಯನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಮದುವೆಯ ದಿನದಂದು ವಧುವನ್ನು ಮದುವೆಯಾಗಲು ನಿರಾಕರಿಸಿದ ಎಂದು ತಿಳಿದುಬಂದಿದೆ.

ವಧುವಿನ ಕುಟುಂಬದವರು ವರದಕ್ಷಿಣೆ ಸೇರಿದಂತೆ ಮದುವೆಗೆ ಖರ್ಚು ಮಾಡಿದ ಎಲ್ಲಾ ಬೆಲೆಬಾಳುವ ವಸ್ತು ಮತ್ತು ಹಣ ಹಿಂದಿರುಗಿಸುವಂತೆ ವರನ ಕುಟುಂಬವನ್ನು ಒತ್ತಾಯಿಸಿದ ಪ್ರಸಂಗವೂ ನಡೆಯಿತು.

ವಿವಾಹದ ಬಹುತೇಕ ಎಲ್ಲಾ ವಿಧಿವಿಧಾನಗಳು ಪೂರ್ಣಗೊಳಿಸಿದ ನಂತರ ವರ ಮದುವೆಯಿಂದ ಹಿಂದೆ ಸರಿದಿದ್ದಾನೆ. ವಧುವಿನ ಮನೆಯವರಿಂದ ಸಾಕಷ್ಟು ವರದಕ್ಷಿಣೆಯನ್ನೂ ಸಹ ತೆಗೆದುಕೊಂಡಿದ್ದರು. ಮದುವೆ ದಿನದಂದು ವಧುವಿಗೆ ಹಾರ ಹಾಕಿದ ನಂತರ ಆತ ಮದುವೆಯಿಂದ ಹಿಂದೆ ಸರಿದು ಸ್ಥಳದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಆದರೆ, ವಧುವಿನ ಕುಟುಂಬಸ್ಥರು ಮತ್ತು ಸಂಬಂಧಿಕರು ಆತನನ್ನು ಹಿಡಿದು ಕುಟುಂಬ ಸದಸ್ಯರೊಂದಿಗೆ ಕೋಣೆಗೆ ತಳ್ಳಿ ಬೀಗ ಹಾಕಿದ್ದರು.

ಬಳಿಕ ವರನ ಮನವೊಲಿಸಲು ಪ್ರಯತ್ನಿಸಿದ್ದು, ಆದರೆ ಆತ ಮನವಿಗೆ ಯಾವುದೇ ಗಮನ ಕೊಡದ ಕಾರಣ, ವಧುವಿನ ಕುಟುಂಬವು ವರದಕ್ಷಿಣೆ ಸೇರಿದಂತೆ ಎಲ್ಲಾ ಹಣವನ್ನು ಅವರಿಗೆ ಹಿಂದಿರುಗಿಸುವಂತೆ ಒತ್ತಾಯಿಸಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...