alex Certify ಬೇರೆ ಮದುವೆ ಮನೆಗೆ ಬಂದ ವರ….! ವಧುವಿಗೆ ಉಂಗುರ ತೊಡಿಸುವ ವೇಳೆ ಗೊತ್ತಾಯ್ತು ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇರೆ ಮದುವೆ ಮನೆಗೆ ಬಂದ ವರ….! ವಧುವಿಗೆ ಉಂಗುರ ತೊಡಿಸುವ ವೇಳೆ ಗೊತ್ತಾಯ್ತು ಸತ್ಯ

ಮದುವೆ ವಧು-ವರರಿಗೆ ಮಾತ್ರವಲ್ಲ ಎರಡು ಕುಟುಂಬಕ್ಕೆ ಸಂತೋಷದ ಸಂಗತಿ. ಮದುವೆ ಸಮಾರಂಭದಲ್ಲಿ ಸಣ್ಣಪುಟ್ಟ ತಪ್ಪುಗಳಾಗುವುದು ಸಹಜ. ಆದ್ರೆ ಬೇರೆ ಮದುವೆ ಮನೆಗೆ ತಲುಪಿದ ವರ ಅಪರಿಚಿತ ವಧುವನ್ನು ಮದುವೆಯಾಗಲು ಮುಂದಾದ್ರೆ ಏನಾಗಬೇಡ?

ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದೆ. ವರನೊಬ್ಬ ಗೂಗಲ್ ಮ್ಯಾಪ್ ಹಾಕಿಕೊಂಡು ಮದುವೆ ಮನೆಗೆ ಹೊರಟಿದ್ದಾನೆ. ಆತನ ತಪ್ಪು ವಿಳಾಸದಿಂದಾಗಿ ತಪ್ಪಾದ ಸ್ಥಳಕ್ಕೆ ಬಂದಿದ್ದಾನೆ. ದುರಾದೃಷ್ಟವಶಾತ್ ಅಲ್ಲಿಯೂ ಮದುವೆ ನಡೆಯುತ್ತಿತ್ತಂತೆ. ಅಲ್ಲಿಗೆ ಬಂದ ವರನನ್ನು, ವಧು ಕಡೆಯವರು ಸ್ವಾಗತಿಸಿದ್ದಾರೆ. ಈತ ವರನ ಕುಟುಂಬಸ್ಥರಿರಬಹುದೆಂದು ಭಾವಿಸಿದ್ದಾರೆ.

ಈ ಸಂದರ್ಭದಲ್ಲಿ ವಧು ಮೇಕಪ್ ಮಾಡುತ್ತಿದ್ದಳಂತೆ. ಆಕೆ ಬಂದ ನಂತ್ರ ಸತ್ಯ ಗೊತ್ತಾಗಿದೆ. ವರನ ಕಡೆಯವರು ವಧು ಕುಟುಂಬಸ್ಥರ ಕ್ಷಮೆ ಕೋರಿ ಅಲ್ಲಿಂದ ತೆರಳಿದ್ದಾರೆ. ಗೂಗಲ್ ಮ್ಯಾಪ್ ಗೆ ತಪ್ಪಾಗಿ ಮಾಹಿತಿ ನೀಡಿದ್ದರಿಂದ ಈ ಎಲ್ಲ ತಪ್ಪುಗಳು ನಡೆದಿವೆ ಎಂದು ವರ ಹೇಳಿದ್ದಾನೆ. ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...