alex Certify ಹಸಿರು ಪಟಾಕಿ ಎಂದರೇನು…? ಇಲ್ಲಿದೆ ಈ ಕುರಿತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸಿರು ಪಟಾಕಿ ಎಂದರೇನು…? ಇಲ್ಲಿದೆ ಈ ಕುರಿತ ಮಾಹಿತಿ

What are 'green crackers' and why you may not find them in shops this  Deepavali | The News Minute

ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಶುರುವಾಗಿದೆ. ದೀಪಾವಳಿಗೂ ಮೊದಲೇ ಪಟಾಕಿ ಸದ್ದು ಕೇಳಿಬರುತ್ತಿದೆ. ಪಟಾಕಿ ಮಾಲಿನ್ಯಕ್ಕೆ ಕಾರಣವಾಗ್ತಿದೆ ಎಂಬ ಕಾರಣಕ್ಕೆ ಅನೇಕ ರಾಜ್ಯಗಳಲ್ಲಿ ಪಟಾಕಿ ಮೇಲೆ ನಿಷೇಧ ಹೇರಲಾಗಿದೆ. ಇನ್ನು ಕೆಲ ರಾಜ್ಯಗಳಲ್ಲಿ ಹಸಿರು ಪಟಾಕಿಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.

ಅಪಾಯಕಾರಿ ಹಾಗೂ ಮಾಲಿನ್ಯಕಾರಕ ಪಟಾಕಿಗಳ ಬದಲು ಹಸಿರು ಪಟಾಕಿಗೆ ಅವಕಾಶ ನೀಡಲಾಗಿದೆ. ಸಾಮಾನ್ಯ ಪಟಾಕಿಯಿಂದ ಮಾಲಿನ್ಯ ಹೆಚ್ಚಾಗುತ್ತದೆ. ಹಸಿರು ಪಟಾಕಿ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಸಾಮಾನ್ಯ ಪಟಾಕಿಗಿಂತ  ಹಸಿರು ಪಟಾಕಿಗಳು ಭಿನ್ನವಾಗಿವೆ. ಹಸಿರು ಪಟಾಕಿಗಳನ್ನು, ನ್ಯಾಷನಲ್ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ ಆವಿಷ್ಕರಿಸಿದೆ. ಸಾಮಾನ್ಯ ಪಟಾಕಿಯಂತೆ ಇವು ಶಬ್ಧ ಮಾಡುತ್ತವೆ. ಆದ್ರೆ ಮಾಲಿನ್ಯ ಕಡಿಮೆ. ಇದಲ್ಲದೆ ಸಾಮಾನ್ಯ ಪಟಾಕಿಗಳಿಗಿಂತ ಕಡಿಮೆ ಹಾನಿಕಾರಕ.

ಹಸಿರು ಪಟಾಕಿಗಳು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಅಲ್ಯೂಮಿನಿಯಂ, ಬೇರಿಯಂ, ಪೊಟ್ಯಾಸಿಯಮ್ ನೈಟ್ರೇಟ್ ಮತ್ತು ಕಾರ್ಬನ್ ಬಳಸುವುದಿಲ್ಲ. ಹಸಿರು ಪಟಾಕಿಯಿಂದ ಬರುವ ಶಬ್ಧ ಕೂಡ ಕಡಿಮೆಯಿರುತ್ತದೆ.

ಸಾಮಾನ್ಯ ಪಟಾಕಿಗಿಂತ ಇವು ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ಹಸಿರು ಪಟಾಕಿಗಳ ಬೆಲೆ, ಸಾಮಾನ್ಯ ಪಟಾಕಿಗಿಂತ ದುಬಾರಿಯಾಗಿದೆ.

ಸರ್ಕಾರಿ ನೋಂದಾಯಿತ ಅಂಗಡಿಯಲ್ಲಿ ಹಸಿರು ಪಟಾಕಿಗಳನ್ನು ಖರೀದಿಸಬಹುದು. ಆನ್ಲೈನ್ ನಲ್ಲಿಯೂ ಪಟಾಕಿ ಲಭ್ಯವಿದೆ. ಹಸಿರು ಪಟಾಕಿ ಸುಟ್ಟು, ಮಾಲಿನ್ಯ ಕಡಿಮೆ ಮಾಡಿ ಎಂದು ಸರ್ಕಾರಗಳು ಮನವಿ ಮಾಡಿವೆ. ಕೊರೊನಾ ಸಂದರ್ಭದಲ್ಲಿ ಮಾಲಿನ್ಯ ಹೆಚ್ಚಾದ್ರೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ, ಅಪಾಯ ಹೆಚ್ಚಾಗುವ ಸಾಧ್ಯತೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...