alex Certify ಹುಬ್ಬೇರಿಸುವಂತಿದೆ ಬೃಹತ್‌ ಟ್ರಕ್‌ ನಲ್ಲಿ ಪೊಲೀಸರು ತೆಗೆದುಕೊಂಡು ಹೋದ ವಾಹನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಬ್ಬೇರಿಸುವಂತಿದೆ ಬೃಹತ್‌ ಟ್ರಕ್‌ ನಲ್ಲಿ ಪೊಲೀಸರು ತೆಗೆದುಕೊಂಡು ಹೋದ ವಾಹನ…!

ʼನೋ ಪಾರ್ಕಿಂಗ್ʼ​ ಸ್ಥಳದಲ್ಲಿ ವಾಹನವನ್ನ ನಿಲ್ಲಿಸಿದ್ರೆ ಅಥವಾ ಸೂಕ್ತವಾದ ದಾಖಲೆ ಇಲ್ಲದೇ ಇದ್ದಲ್ಲಿ ಪೊಲೀಸರು ಅದನ್ನ ತೆಗೆದುಕೊಂಡು ಹೋಗಿ ಸ್ಟೇಷನ್​ನಲ್ಲಿ ಇಡ್ತಾರೆ. ಬಳಿಕ ಪೊಲೀಸರ ಕೈನಿಂದ ವಾಹನವನ್ನ ವಾಪಸ್​ ಪಡೆಯಬೇಕು ಅಂದರೆ ಅನೇಕ ಕಾನೂನು ಕ್ರಮಗಳನ್ನ ಪಾಲಿಸಬೇಕಾಗುತ್ತದೆ.

ಆದರೆ ಇಂಗ್ಲೆಂಡ್​ನ ಪೊಲೀಸರು ಸೂಕ್ತ ದಾಖಲೆ ಹೊಂದಿರದ ವಾಹನವನ್ನ ತೆಗೆದುಕೊಂಡು ಹೋದ ಕಾರಣಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಟೀಕೆಯನ್ನ ಎದುರಿಸುತ್ತಿದ್ದಾರೆ.

ಜೂನ್​ 4ನೇ ತಾರೀಖಿನಂದು ನಡೆದ ಘಟನೆ ಇದಾಗಿದ್ದು ಸಣ್ಣ ಮೆಕಾನಿಕಲ್​​ ಮಿನಿ ಎಲೆಕ್ಟ್ರಿಕ್​ ಸ್ಕೂಟರ್​ನ್ನು ಪೊಲೀಸರು ಬರೋಬ್ಬರಿ 7.5 ಟನ್​ ಟ್ರಕ್​​ನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಈ ಮಿನಿ ಎಲೆಕ್ಟ್ರಿಕ್​ ಸ್ಕೂಟರ್​ ಅಬ್ಬಬ್ಬಾ ಅಂದ್ರೆ 15 ಕೆಜಿ ಇರಬಹುದು..!

ಈ ಫೋಟೋವನ್ನ ಪೊಲೀಸರು ಫೇಸ್​ಬುಕ್​ನಲ್ಲಿ ಶೇರ್​ ಮಾಡಿದ್ದಾರೆ. ಆದರೆ ಇದನ್ನ ನೋಡಿದ ನೆಟ್ಟಿಗರು ಇಷ್ಟು ಪುಟ್ಟ ವಾಹನಕ್ಕೆ ಅಂತಾ ದೊಡ್ಡ ಟ್ರಕ್​ ಬಳಕೆ ಮಾಡುವ ಅವಶ್ಯಕತೆ ಇತ್ತೇ..? ಜನರ ತೆರಿಗೆ ಹಣವನ್ನ ಈ ರೀತಿ ದುರ್ಬಳಕೆ ಮಾಡುತ್ತೀರಾ..? ಎಂದು ಪ್ರಶ್ನೆ ಮಾಡಿದ್ದಾರೆ.

E-Scooter seized today in Hereford. ?Please ensure you know the rules…as a motor vehicle, they must comply with…

Posted by Hereford Cops on Friday, June 4, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...