alex Certify ಲಾಟರಿಯಲ್ಲಿ ಖುಲಾಯಿಸಿದ ಅದೃಷ್ಟ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಟರಿಯಲ್ಲಿ ಖುಲಾಯಿಸಿದ ಅದೃಷ್ಟ…!

ಬೆಂಗಳೂರು: ರಾಜ್ಯದಲ್ಲಿ 2 ಹಂತದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಲಾಟರಿಯಲ್ಲಿ 15 ಮಂದಿಗೆ ಜಯ ಸಿಕ್ಕಿದೆ.

ಮತ ಎಣಿಕೆ ಸಂದರ್ಭದಲ್ಲಿ ಸಮಬಲ ಸಾಧಿಸಿದ್ದ ಹಲವು ಅಭ್ಯರ್ಥಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ. ಮಂಡ್ಯ ಜಿಲ್ಲೆ ಕೆಆರ್ ಪೇಟೆಯ ಬೂಕನಕೆರೆಯಲ್ಲಿ ಮಹಿಳೆ, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನಲ್ಲಿ ಒಬ್ಬರು, ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನಲ್ಲಿ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಲಾಟರಿ ಮೂಲಕ ಆಯ್ಕೆಯಾಗಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಮೂರು ಗ್ರಾಮಪಂಚಾಯಿತಿಗಳಲ್ಲಿ, ಮೈಸೂರು ಜಿಲ್ಲೆಯಲ್ಲಿ 2 ಅಭ್ಯರ್ಥಿಗಳು ಲಾಟರಿ ಮೂಲಕ ಆಯ್ಕೆಯಾಗಿದ್ದಾರೆನ್ನಲಾಗಿದೆ.

ಅನೇಕ ಅಭ್ಯರ್ಥಿಗಳು 1,2,3 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಧಾರವಾಡ ಜಿಲ್ಲೆ ಹೆಬಸೂರ ವಾರ್ಡ್ ನಲ್ಲಿ ಒಂದು ಮತ, ಕುಸಗಲ್ ಗ್ರಾಪಂ ಬಿ.ಅರಳಿ ಕಟ್ಟೆ ಗ್ರಾಮದ ಎರಡನೇ ವಾರ್ಡ್ ನನಲ್ಲಿ ಮೂರು ಮತಗಳಿಂದ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...