alex Certify BIG NEWS: ಸರ್ಕಾರಿ ಉದ್ಯೋಗ ಕೋರಿ ಕಳೆದ 8 ವರ್ಷಗಳಲ್ಲಿ ಬಂದಿದೆ 22 ಕೋಟಿ ಅರ್ಜಿ; ಈ ಪೈಕಿ ಆಯ್ಕೆಯಾದವರು ಕೇವಲ 7.22 ಲಕ್ಷ ಮಂದಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸರ್ಕಾರಿ ಉದ್ಯೋಗ ಕೋರಿ ಕಳೆದ 8 ವರ್ಷಗಳಲ್ಲಿ ಬಂದಿದೆ 22 ಕೋಟಿ ಅರ್ಜಿ; ಈ ಪೈಕಿ ಆಯ್ಕೆಯಾದವರು ಕೇವಲ 7.22 ಲಕ್ಷ ಮಂದಿ….!

ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಎಷ್ಟರಮಟ್ಟಿಗೆ ತಾಂಡವವಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದನ್ನು ಜ್ವಲಂತವಾಗಿ ಬಿಂಬಿಸುವ ವಿಷಯವನ್ನು ಖುದ್ದು ಕೇಂದ್ರ ಸರ್ಕಾರವೇ ಬಹಿರಂಗಪಡಿಸಿದ್ದು, ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಉದ್ಯೋಗ ಕೋರಿ ಬರೋಬ್ಬರಿ 22 ಕೋಟಿ ಅರ್ಜಿಗಳು ಬಂದಿವೆ ಎನ್ನಲಾಗಿದ್ದು, ಈ ಪೈಕಿ ಆಯ್ಕೆಯಾದವರು ಕೇವಲ 7.22 ಲಕ್ಷ ಮಂದಿ ಮಾತ್ರ.

ಲೋಕಸಭೆಯಲ್ಲಿ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಸದಸ್ಯರೊಬ್ಬರ ಪ್ರಶ್ನೆಗೆ ಲಿಖಿತ ಉತ್ತರ ಒದಗಿಸಿದ್ದು 2014-15ರಿಂದ 2021-22 ರ ವರೆಗೆ ಕೇಂದ್ರ ಸರ್ಕಾರ ಉದ್ಯೋಗ ಕೋರಿ 22.05 ಕೋಟಿ ಅರ್ಜಿಗಳು ಬಂದಿದ್ದು, ಈ ಪೈಕಿ 7.2 ಲಕ್ಷ (0.33%) ಮಂದಿಗೆ ಉದ್ಯೋಗ ಒದಗಿಸಲಾಗಿದೆ ಎಂದಿದ್ದಾರೆ. ಇದರಲ್ಲಿ 2019-20 ರ ಸಾಲಿನಲ್ಲಿ ಮಾತ್ರ ಅತಿ ಹೆಚ್ಚು ಅಂದರೆ 1.47 ಲಕ್ಷ ಮಂದಿಗೆ ಉದ್ಯೋಗ ನೀಡಲಾಗಿದೆ.

ಎಂಟು ವರ್ಷಗಳಲ್ಲಿ ಉದ್ಯೋಗ ಪಡೆದ 7.22 ಲಕ್ಷ ಮಂದಿ ಪೈಕಿ ವರ್ಷವಾರು ವಿವರ ಇಂತಿದ್ದು, 2015-16 ರಲ್ಲಿ 1.11 ಲಕ್ಷ ಮಂದಿ, 2016-17 ರಲ್ಲಿ 1.01 ಲಕ್ಷ ಮಂದಿ, 2017-18 ರಲ್ಲಿ 76,147 ಮಂದಿ,2018-19 ರಲ್ಲಿ 38,100 ಮಂದಿ, 2020-21 ರಲ್ಲಿ 78,555 ಮಂದಿ ಹಾಗೂ 2021-22 ರಲ್ಲಿ 38,850 ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...