ವಾಹನ ಪರವಾನಿಗೆ ನವೀಕರಣ ಅವಧಿಯನ್ನು ಅಕ್ಟೋಬರ್ 31ರ ನಂತರ ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮಾಹಿತಿ ನೀಡಿದೆ.
ಸೆಪ್ಟೆಂಬರ್ 30ರಂದು ಕೇಂದ್ರ ಸಚಿವಾಲಯವು ವಾಹನ ಪರವಾನಿಗೆ, ನೋಂದಣಿ ಪ್ರಮಾಣ ಪತ್ರ ಸೇರಿದಂತೆ ವಾಹನ ಸಂಬಂಧಿ ವಿವಿಧ ದಾಖಲೆಗಳನ್ನು ಸಲ್ಲಿಸಲು ಅಕ್ಟೋಬರ್ 31ರವರೆಗೆ ಅವಧಿ ವಿಸ್ತರಣೆ ಮಾಡಿತ್ತು.
ಕೊರೊನಾ ಸಾಂಕ್ರಾಮಿಕವನ್ನು ಗಮನದಲ್ಲಿರಿಸಿ ಕೇಂದ್ರ ಸರ್ಕಾರವು ಕಳೆದ ಒಂದೂವರೆ ವರ್ಷಗಳಿಂದಲೂ ವಾಹನ ಸಂಬಂಧ ದಾಖಲೆಗಳನ್ನು ಸಲ್ಲಿಸುವ ಅವಧಿ ವಿಸ್ತರಣೆ ಮಾಡುತ್ತಲೇ ಬಂದಿದೆ.
ಕೋವಿಡ್ 19 ಪರಿಸ್ಥಿತಿಯು ದೇಶದಲ್ಲಿ ಮುಂದುವರಿದಿರುವ ಹಿನ್ನೆಲೆಯಲ್ಲಿ ವಾಹನ ಪರವಾನಿಗೆ ನವೀಕರಣ ಅವಧಿಯನ್ನು ಅಕ್ಟೋಬರ್ 31ರವರೆಗೆ ವಿಸ್ತರಣೆ ಮಾಡಿದೆ.
2020ರ ಫೆಬ್ರವರಿ 1ರಿಂದ ವಾಹನ ಸಂಬಂಧಿ ದಾಖಲೆಗಳ ಅವಧಿ ಮೀರಿದವರು 2021 ರ ಅಕ್ಟೋಬರ್ 31ರವರೆಗೆ ದಾಖಲೆ ನವೀಕರಣಕ್ಕೆ ವಿನಾಯಿತಿ ಪಡೆದಿದ್ದಾರೆ ಎಂದು ಕೇಂದ್ರ ಸಚಿವಾಲಯವು ಸೆಪ್ಟೆಂಬರ್ 30ರಂದು ಹೇಳಿಕೆ ನೀಡಿತ್ತು.