alex Certify Good News: ಅಕ್ರಮ ಇ ಟಿಕೆಟ್​ ಹಾವಳಿಗೆ ಬ್ರೇಕ್​ ಹಾಕಲು‌ ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Good News: ಅಕ್ರಮ ಇ ಟಿಕೆಟ್​ ಹಾವಳಿಗೆ ಬ್ರೇಕ್​ ಹಾಕಲು‌ ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ

ಅಕ್ರಮ ಇ ಟಿಕೆಟ್​​ಗಳ ಹಾವಳಿಯನ್ನ ತಡೆಗಟ್ಟಲು ಭಾರತೀಯ ರೈಲ್ವೆ ಇಲಾಖೆ ಹಲವಾರು ಮಹತ್ವದ ಕ್ರಮಗಳನ್ನ ಕೈಗೊಂಡಿದೆ. ಕೇಂದ್ರ ಸಚಿವ ಪಿಯೂಷ್​ ಗೋಯಲ್​​ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಇ ಟಿಕೆಟ್​​​ ಹಾವಳಿ ತಪ್ಪಿಸಲು ರೈಲ್ವೆ ಇಲಾಖೆ ಕೈಗೊಂಡ ಎಲ್ಲಾ ಕ್ರಮಗಳ ಬಗ್ಗೆ ಲಿಖಿತ ರೂಪದಲ್ಲಿ ಮಾಹಿತಿ ಸಲ್ಲಿಸಿದ್ದಾರೆ.

ಇ ಟಿಕೆಟ್​ಗಳನ್ನ ಬುಕ್​ ಮಾಡುವ ವೇಳೆ ಪ್ರಯಾಣಿಕರು ಪೂರ್ತಿ ಹೆಸರನ್ನ ನೀಡಿದ್ದಾರೋ ಇಲ್ಲವೋ ಅನ್ನೋದನ್ನ ಕನ್ಫರ್ಮ್​ ಮಾಡಿಕೊಳ್ಳುವುದು.

ಪ್ರಯಾಣಿಕನ ಪೂರ್ತಿ ಹೆಸರು ಹಾಗೂ ಉಪನಾಮ ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲೆಲ್ಲ ನಮೂದಿಸುವುದು.

ರಿಸರ್ವ್​ ಕ್ಲಾಸ್​​ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಗುರುತಿನ ಚೀಟಿಯನ್ನ ಹೊಂದುವುದು ಕಡ್ಡಾಯವಾಗಿದೆ.

ಪಿಆರ್​ಎಸ್​ ಕೇಂದ್ರಗಳು, ಬುಕ್ಕಿಂಗ್​ ಕೇಂದ್ರಗಳು, ಪ್ಲಾಟ್​ ಫಾರಂ ಹಾಗೂ ರೈಲುಗಳಲ್ಲಿ ನಿಯಮಿತ ತಪಾಸಣೆಗಳನ್ನ ನಡೆಸಲಾಗುತ್ತದೆ. ಹಬ್ಬ ಹಾಗೂ ರಜಾದಿನಗಳ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ದಿನಗಳಲ್ಲಿ ಈ ತಪಾಸಣೆ ತೀವ್ರಗೊಳ್ಳಲಿದೆ.

ಆನ್​ಲೈನ್​​ನಲ್ಲಿ ಟಿಕೆಂಟ್​ ಬುಕ್ಕಿಂಗ್​ ಮಾಡುವ ವೇಳೆ ಗ್ರಾಹಕರಿಗೆ ತಮ್ಮ ಮಾಹಿತಿಗಳನ್ನ ನಮೂದಿಸಲು ಹಾಗೂ ಕ್ಯಾಪ್ಚಾಗಳನ್ನ ಟೈಪ್​ ಮಾಡಲು ನಿಗದಿತ ಸಮಯ ನೀಡಲಾಗುತ್ತೆ. 35 ಸೆಕೆಂಡುಗಳ ಮೊದಲು ಯಾವುದೇ ಟಿಕೆಟ್ ಕಾಯ್ದಿರಿಸಲಾಗುವುದಿಲ್ಲ. ಬಳಕೆದಾರರ ಐಡಿಗಳನ್ನು ಪ್ರತಿದಿನವೂ ಪರಿಶೀಲಿಸಲಾಗುತ್ತದೆ ಮತ್ತು ಟಿಕೆಟ್‌ಗಳನ್ನು ವೇಗವಾಗಿ ಕಾಯ್ದಿರಿಸುವಂತಹ ಐಡಿಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

ಐಆರ್​ಸಿಟಿಸಿ ಪೋರ್ಟಲ್​ನಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ಯೂಸರ್​ ಐಡಿಯನ್ನ ಬಳಕೆ ಮಾಡಿ ಒಂದು ತಿಂಗಳಲ್ಲಿ 6 ಟಿಕೆಟ್​ಗಳನ್ನ ಬುಕ್​ ಮಾಡಲು ಅವಕಾಶ ನೀಡಲಾಗಿದೆ. ಐಆರ್​ಸಿಟಿಸಿ ಐಡಿಯ ಜೊತೆಗೆ ಆಧಾರ್​ ಕಾರ್ಡ್ ಲಿಂಕ್​ ಮಾಡಿದವರು ಹಾಗೂ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಪೈಕಿ ಒಬ್ಬರ ಆಧಾರ್ ಕಾರ್ಡ್​ ಮಾಹಿತಿ ನೀಡಿದ್ದಲ್ಲಿ 12 ಟಿಕೆಟ್​ಗಳನ್ನ ಬುಕ್​ ಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...