alex Certify ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ: ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ: ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿ

ಬೆಂಗಳೂರು: ಸರ್ಕಾರಿ ನೌಕರರು ಕೋಮು ಸಂಘಟನೆ ಸದಸ್ಯರಾಗುವಂತಿಲ್ಲ. ಈ ಬಗ್ಗೆ ನಾಗರಿಕ ಸೇವಾ ನೌಕರರ ನಿಯಮಗಳಿಗೆ ತಿದ್ದುಪಡಿ ತರಲಿದ್ದು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡುವ ನಿರೀಕ್ಷೆ ಇದೆ.

ನೌಕರರು ಸಮುದಾಯದಲ್ಲಿ ದ್ವೇಷ ಹರಡುವ ಯಾವುದೇ ಕೋಮು ಸಂಘಟನೆಗಳ ಸದಸ್ಯರಾಗುವಂತಿಲ್ಲ. ನೌಕರರ ನಡತೆಯ ನಿಯಮಾವಳಿಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದ್ದು, ದ್ವೇಷ ಅಸೂಯೆ ಭಾವನೆಗಳನ್ನು ಕೆರಳಿಸುವ ಸಂಘಟನೆಗಳಿಂದ ನೌಕರರನ್ನು ದೂರವಿಡಲು ಸರ್ಕಾರ ಕ್ರಮ ಕೈಗೊಂಡಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ನೌಕರರ ನಡತೆಯ ನಿಯಮಾವಳಿಗೆ ತಿದ್ದುಪಡಿ ತರುವ ಪ್ರಸ್ತಾವನೆಯನ್ನು ಸಂಪುಟದ ಮುಂದೆ ಇಟ್ಟಿದ್ದು, ಇದಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...