alex Certify ಈ ಕಾರುಗಳಲ್ಲಿ CNG – LPG ಕಿಟ್​ ಅಳವಡಿಕೆಗೆ ಸರ್ಕಾರದ ಅನುಮತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರುಗಳಲ್ಲಿ CNG – LPG ಕಿಟ್​ ಅಳವಡಿಕೆಗೆ ಸರ್ಕಾರದ ಅನುಮತಿ

ದೇಶದಲ್ಲಿ ಇಂಗಾಲದ ಮಾನಾಕ್ಸೈಡ್​ ಮತ್ತು ಹೆೈಡ್ರೋಕಾರ್ಬನ್​ ಹೊರಸೂಸುವಿಕೆಯ ಮಟ್ಟವನ್ನು ಕಡಿಮೆ ಮಾಡಲು ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ. ಅದರತ್ತ ಮತ್ತೊಂದು ಹೆಜ್ಜೆ ಇಡುತ್ತಿದ್ದು, ಬಿಎಸ್​-4 ಎಮಿಷನ್​ ಮಾನದಂಡಗಳಿಗೆ ಅನುಗುಣವಾಗಿರುವ ಪೆಟ್ರೋಲ್​ ಮತ್ತು ಡೀಸೆಲ್​ ವಾಹನಗಳಲ್ಲಿ ಸಿ.ಎನ್.​ಜಿ. ಮತ್ತು ಎಲ್​.ಪಿ.ಜಿ. ಕಿಟ್​ಗಳನ್ನು ಅಳವಡಿಸಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ.

ಈಗಿನಂತೆ, ಬಿಎಸ್​-4 ಎಮಿಷನ್​ ಮಾನದಂಡಗಳಿಗೆ ಅನುಗುಣವಾಗಿರುವ ವಾಹನಗಳಲ್ಲಿ ಮಾತ್ರ ಇಂತಹ ಮಾರ್ಪಾಡುಗಳನ್ನು ಅನುಮತಿಸಲಾಗಿದೆ.

ಬಿಎಸ್​ (ಭಾರತ್​ ಸ್ಟೇಜ್​)-4 ಗ್ಯಾಸೋಲಿನ್​ ವಾಹನಗಳಲ್ಲಿ ಸಿ.ಎನ್​.ಜಿ. ಮತ್ತು ಎಲ್.​ಪಿ.ಜಿ. ಕಿಟ್​ಗಳನ್ನು ಮರುಹೊಂದಿಸಲು ಮತ್ತು 3.5 ಟನ್​ಗಳಿಗಿಂತ ಕಡಿಮೆ ಇರುವ ಬಿಎಸ್​-4 ವಾಹನಗಳ ಸಂದರ್ಭದಲ್ಲಿ ಡೀಸೆಲ್​ ಎಂಜಿನ್​ಗಳನ್ನು ಸಿ.ಎನ್.​ಜಿ./ಎಲ್.​ಪಿ.ಜಿ. ಎಂಜಿನ್​ಗಳೊಂದಿಗೆ ಬದಲಾಯಿಸಲು ಸೂಚಿಸಲಾಗಿದೆ.

ಅಧಿಸೂಚನೆಯು ರಿಟ್ರೊಫಿಟ್​ಮೆಂಟ್​ಗೆ ವಿಧದ ಅನುಮೋದನೆಯ ಅವಶ್ಯಕತೆಗಳನ್ನು ತಿಳಿಸುತ್ತದೆ. ಸಿ.ಎನ್​.ಜಿ. ಪರಿಸರ ಸ್ನೇಹಿ ಇಂಧನವಾಗಿದ್ದು, ಪೆಟ್ರೋಲ್​ ಮತ್ತು ಡೀಸೆಲ್​ ಎಂಜಿನ್​ಗಳಿಗೆ ಹೋಲಿಸಿದರೆ ಕಾರ್ಬನ್​ ಮಾನಾಕ್ಸೈಡ್​, ಹೈಡ್ರೋಕಾರ್ಬನ್​, ಹೊಗೆಯ ಹೊರಸೂಸುವಿಕೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಸಚಿವಾಲಯವು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...