alex Certify ಸಮಗ್ರ ಶಿಕ್ಷಣ ಅನುದಾನ ಬಳಸಿಕೊಂಡು ಮಾರ್ಚ್ ವರೆಗಿನ ವಿದ್ಯುತ್, ನೀರಿನ ಶುಲ್ಕ ಭರಿಸಲು ಶಾಲಾ-ಕಾಲೇಜುಗಳಿಗೆ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮಗ್ರ ಶಿಕ್ಷಣ ಅನುದಾನ ಬಳಸಿಕೊಂಡು ಮಾರ್ಚ್ ವರೆಗಿನ ವಿದ್ಯುತ್, ನೀರಿನ ಶುಲ್ಕ ಭರಿಸಲು ಶಾಲಾ-ಕಾಲೇಜುಗಳಿಗೆ ಸೂಚನೆ

ಬೆಂಗಳೂರು: ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅನುದಾನ ಬಳಸಿಕೊಂಡು 2024ರ ಮಾರ್ಚ್ ವರೆಗಿನ ವಿದ್ಯುತ್ ಮತ್ತು ನೀರಿನ ಶುಲ್ಕವನ್ನು ಭರಿಸುವಂತೆ ಸರ್ಕಾರಿ ಶಾಲಾ, ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ.

ಸಮಗ್ರ ಶಿಕ್ಷಣ ಕರ್ನಾಟಕದ ನಿರ್ದೇಶಕರು ಈ ಬಗ್ಗೆ ಸೂಚನೆ ನೀಡಿದ್ದು, ಸರ್ಕಾರಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಏಪ್ರಿಲ್ 1ರಿಂದ ಉಚಿತ ವಿದ್ಯುತ್, ನೀರು ಪೂರೈಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಈಗಾಗಲೇ ಆದೇಶ ಹೊರಡಿಸಲಾಗಿದೆ,

2024 -25 ನೇ ಸಾಲಿನಿಂದ ವಿದ್ಯುತ್ ಮತ್ತು ನೀರಿಗೆ ಅಗತ್ಯವಾದ ವಾರ್ಷಿಕ ವೆಚ್ಚದ ಪ್ರಸ್ತಾಪವನ್ನು ಇಂಧನ ಮತ್ತು ನಗರಾಭಿವೃದ್ಧಿ ಇಲಾಖೆಗಳು ನೇರವಾಗಿ ಆರ್ಥಿಕ ಇಲಾಖೆಗೆ ಸಲ್ಲಿಸಿ ಅಗತ್ಯ ಅನುದಾನ ಪಡೆದುಕೊಳ್ಳಲಿವೆ. ಮಾರ್ಚ್ ವರೆಗಿನ ವಿದ್ಯುತ್ ಮತ್ತು ನೀರಿನ ಶುಲ್ಕವನ್ನು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅನುದಾನ ಬಳಸಿಕೊಂಡು ಭರಿಸುವಂತೆ ಸರ್ಕಾರಿ ಶಾಲಾ, ಕಾಲೇಜುಗಳಿಗೆ ಸೂಚಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...