alex Certify ಗೂಗಲ್‌ ಕ್ರೋಮ್‌, ಮೊಜಿಲ್ಲಾ ಬಳಕೆದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೂಗಲ್‌ ಕ್ರೋಮ್‌, ಮೊಜಿಲ್ಲಾ ಬಳಕೆದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ನವದೆಹಲಿ: ಗೂಗಲ್‌ ಕ್ರೋಮ್‌ ಮತ್ತು ಮೊಜಿಲ್ಲಾದ ಕೆಲವು ಉತ್ಪನ್ನಗಳಲ್ಲಿ ತಾಂತ್ರಿಕ ದೋಷಗಳಿರುವುದು ಪತ್ತೆಯಾಗಿದೆ. ಹ್ಯಾಕರ್‌ಗಳು ಇದನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಭಾರತದ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌- ಇಂಡಿಯಾ (ಸಿಇಆರ್‌ಟಿ-ಇನ್‌) ಎಚ್ಚರಿಸಿದೆ.

ತಾಂತ್ರಿಕ ದೋಷಗಳು ಬಳಕೆದಾರರ ಎಲ್ಲ ಡೇಟಾವನ್ನೂ ಸುಲಭವಾಗಿ ಹ್ಯಾಕರ್‌ಗಳಿಗೆ ಒದಗಿಸುತ್ತಿವೆ. ಎಲ್ಲ ಭದ್ರತಾ ವ್ಯವಸ್ಥೆಯನ್ನು ಮೀರಿ ಅನಿಯಂತ್ರಿಕ ಕೋಡ್‌ಗಳು ಕೆಲಸ ನಿರ್ವಹಿಸುವಂತೆ ಮಾಡುತ್ತಿವೆ. ಕ್ರೋಮ್ ಒಎಸ್‌ನ 96.0.4664.209 ಕ್ಕಿಂತ ಮೊದಲಿನ ವರ್ಷನ್‌ನಲ್ಲಿ “ಹೈರಿಸ್ಕ್‌” ಗುರುತಿಸಲಾಗಿದೆ. CVE-2021-43527, CVE-2022-1489, CVE-2022-1633, CVE-202-1636, CVE-2022-1859, CVE-2022-1867, ಮತ್ತು C20ಗಳಲ್ಲಿ ಇಂತಹ ದೋಷವನ್ನು ಗೂಗಲ್‌ ಗುರುತಿಸಿ, ಸರಿಪಡಿಸಿದೆ. ಅಲ್ಲದೆ. ಇತ್ತೀಚಿನ ಕ್ರೋಮ್‌ ಒಎಸ್‌ ಆವೃತ್ತಿ ಡೌನ್‌ಲೋಡ್‌ ಮಾಡಬೇಕು ಎಂದು ಬಳಕೆದಾರರಿಗೆ ಮನವಿ ಮಾಡಿದೆ.

ಮೊಜಿಲ್ಲಾ ಫೈರ್‌ಫಾಕ್ಸ್‌ ಐಒಎಸ್‌ ಆವೃತ್ತಿಯಲ್ಲಿ 101ಕ್ಕಿಂತ ಮೊದಲಿನ, ಮೊಜಿಲಾ ಫೈರ್‌ಫಾಕ್ಸ್‌ ಥಂಡರ್‌ಬರ್ಡ್‌ನಲ್ಲಿ 91.10ಕ್ಕಿಂತ ಮೊದಲಿನ, ಮೊಜಿಲಾ ಫೈರ್‌ಫಾಕ್ಸ್‌ ಇಎಸ್‌ಆರ್‌ ಆವೃತ್ತಿಗಳಲ್ಲಿ ತಾಂತ್ರಿಕ ದೋಷಗಳಾಗಿವೆ. ಅದನ್ನು ಸರಿಪಡಿಸಲಾಗಿದ್ದು, ಅಪ್ಡೇಟೆಡ್‌ ಬ್ರೌಸರ್‌ಗಳನ್ನು ಡೌನ್‌ಲೋಡಲು ಕಂಪನಿ ಬಳಕೆದಾರರಲ್ಲಿ ಮನವಿ ಮಾಡಿದೆ.

ಸಿಇಆರ್‌ಟಿ-ಇನ್‌ನ ಪ್ರಕಾರ, ಈ ತಾಂತ್ರಿಕ ದೋಷಗಳ ಕಾರಣ ಉದ್ದೇಶಿತ ವ್ಯವಸ್ಥೆಗಳ ಮೇಲೆ ಡಿನೇಯಲ್‌ ಆಫ್‌ ಸರ್ವೀಸ್ ಅಟ್ಯಾಕ್‌ ಮಾಡುವುದಕ್ಕೆ ಹ್ಯಾಕರ್‌ಗಳಿಗೆ ಅವಕಾಶವಾಗುತ್ತದೆ. ಹ್ಯಾಕರ್‌ಗಳ ಕಾರಣದಿಂದಾಗಿ ಮಾಹಿತಿ ವ್ಯವಸ್ಥೆ ಅಥವಾ ಇತರ ಸಂಪನ್ಮೂಲಗಳನ್ನು ಪ್ರವೇಶಿಸಲು ಬಳಕೆದಾರರಿಗೆ ಸಾಧ್ಯವಾಗದಿದ್ದಾಗ ಈ ದಾಳಿ ಸಂಭವಿಸಿದೆ ಎಂಬುದು ಖಾತರಿ. ಹೀಗಾಗಿ ಅಪ್ಡೇಟೆಡ್‌ ವರ್ಷನ್‌ ಅನ್ನು ಬಳಸುವಂತೆ ಬಳಕೆದಾರರಿಗೆ ಕಂಪನಿಗಳು ಮನವಿ ಮಾಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...