alex Certify ಗಗನಕ್ಕೇರಿದ ತೈಲಬೆಲೆ: ಶಾಸಕರ ಕಾರು ದುರ್ಬಳಕೆ ತಪ್ಪಿಸಲು ರಾಜ್ಯ ಸರ್ಕಾರದಿಂದ ಮಾಸ್ಟರ್​ ಪ್ಲಾನ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಗನಕ್ಕೇರಿದ ತೈಲಬೆಲೆ: ಶಾಸಕರ ಕಾರು ದುರ್ಬಳಕೆ ತಪ್ಪಿಸಲು ರಾಜ್ಯ ಸರ್ಕಾರದಿಂದ ಮಾಸ್ಟರ್​ ಪ್ಲಾನ್​

ದೇಶದಲ್ಲಿ ತೈಲೋತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಷ್ಟು ದಿನ ಪೆಟ್ರೋಲ್​ ದರ ಮಾತ್ರ ಶತಕ ದಾಟಿತ್ತು. ಇದೀಗ ಡೀಸೆಲ್​ ದರ ಕೂಡ ಶತಕ ಬಾರಿಸಿದೆ. ಪೆಟ್ರೋಲ್​ ಹಾಗೂ ಡೀಸೆಲ್​ ದರ ಏರಿಕೆಯು ಕೇವಲ ಜನಸಾಮಾನ್ಯನಿಗೆ ಮಾತ್ರವಲ್ಲದೇ ಸರ್ಕಾರದ ಪಾಲಿಗೂ ಚಿಂತಾಜನಕ ವಿಷಯವಾಗಿ ಬದಲಾಗಿದೆ.

ಅರಮನೆ ನಗರಿಯಲ್ಲಿ ನವರಾತ್ರಿ 5ನೇ ದಿನದ ಸಂಭ್ರಮ: ಸ್ಕಂದಮಾತೆಗೆ ಪೂಜೆ ಸಲ್ಲಿಸಿ ಸಿಂಹಾಸನವೇರಲಿದ್ದಾರೆ ಯದುವೀರ್ ಒಡೆಯರ್​​

ತೈಲೋತ್ಪನ್ನಗಳ ದರ ಏರಿಕೆಯ ಹಿನ್ನೆಲೆಯಲ್ಲಿ ಶಾಸಕರ ಕಾರುಗಳು ದುರ್ಬಳಕೆಯಾಗದಂತೆ ತಡೆಯಲು ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್​ ರೂಪಿಸಿದೆ. ಮಿತವ್ಯಯ ಮಾಡಲು ನಿರ್ಧರಿಸಿರುವ ಆರ್ಥಿಕ ಇಲಾಖೆಯು ಹೊಸ ಕ್ರಮವೊಂದನ್ನು ಕೈಗೊಂಡಿದೆ.

ಶಾಸಕರ ಆಪ್ತರು ಶಾಸಕರ ಹೆಸರಿನಲ್ಲಿ ಕಾರು ಬಳಕೆ ಮಾಡುತ್ತಿರುವ ವಿಚಾರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಟ್ರಿಪ್​ಶೀಟ್​​ಗೆ ಸಹಿ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ. ಟ್ರಿಪ್​ ಶೀಟ್​ಗೆ ಪ್ರತಿಬಾರಿ ಶಾಸಕರೇ ಸಹಿ ಹಾಕಬೇಕು. ಈ ರೀತಿ ಮಾಡುವುದರಿಂದ ಶಾಸಕರ ಪಿಎ ಹಾಗೂ ಆಪ್ತರು ಇನ್ನೋವಾ ಕಾರನ್ನು ದುರ್ಬಳಕೆ ಮಾಡುವುದನ್ನು ತಪ್ಪಿಸಬಹುದಾಗಿದೆ ಎಂದು ಅಂದಾಜಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...