alex Certify ಡಿಟರ್ಜೆಂಟ್​ನಿಂದ ಪತಿಯ ಲ್ಯಾಪ್ ​​ಟಾಪ್​​ ತೊಳೆದ ಪತ್ನಿ: ಸಂಗಾತಿಯ ಅತಿಯಾದ ಸ್ವಚ್ಛತೆ ಕಂಡು ಬೇಸತ್ತ ಟೆಕ್ಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಟರ್ಜೆಂಟ್​ನಿಂದ ಪತಿಯ ಲ್ಯಾಪ್ ​​ಟಾಪ್​​ ತೊಳೆದ ಪತ್ನಿ: ಸಂಗಾತಿಯ ಅತಿಯಾದ ಸ್ವಚ್ಛತೆ ಕಂಡು ಬೇಸತ್ತ ಟೆಕ್ಕಿ

ಪತ್ನಿಯ ಸ್ವಚ್ಛತೆಯ ಗೀಳಿನಿಂದ ಬೇಸತ್ತ ಪತಿಯೊಬ್ಬ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಮುಂದಾದ ವಿಚಿತ್ರ ಘಟನೆಯು ಬೆಂಗಳೂರಿನಲ್ಲಿ ನಡೆದಿದೆ. ಪತ್ನಿಗೆ ಸ್ವಚ್ಛತೆಯ ಹುಚ್ಚು ಎಷ್ಟರಮಟ್ಟಿಗೆ ಇದೆ ಅಂದರೆ ಆಕೆ ಒಮ್ಮೆ ಡಿಟರ್ಜೆಂಟ್​ನಿಂದ ತನ್ನ ಟೆಕ್ಕಿ ಪತಿಯ ಫೋನ್​ ಹಾಗೂ ಲ್ಯಾಪ್​ ಟಾಪ್​ನ್ನು ತೊಳೆದಿದ್ದಾಳೆ.

ಬೆಂಗಳೂರಿನ ಆರ್​ಟಿ ನಗರದ ನಿವಾಸಿಯಾದ ರಾಹುಲ್​ ಹಾಗೂ ಸುಮನ್​( ಹೆಸರು ಬದಲಿಸಲಾಗಿದೆ) 2009ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಬಳಿಕ ಇಬ್ಬರು ಇಂಗ್ಲೆಂಡ್​ಗೆ ತೆರಳಿದ್ದರು. ವೃತ್ತಿಯಲ್ಲಿ ರಾಹುಲ್​ ಟೆಕ್ಕಿಯಾಗಿದ್ದು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸುಮನ್​​ ತನ್ನ ಮನೆಯನ್ನು ಅತಿಯಾಗಿ ಶುಚಿಗೊಳಿಸುತ್ತಿರೋದನ್ನು ಕಂಡು ಆರಂಭದಲ್ಲಿ ರಾಹುಲ್​ ಕೂಡ ಅತಿಯಾಗಿ ಖುಷಿಗೊಂಡಿದ್ದರು.

ಮದುವೆಯಾಗಿ ಎರಡು ವರ್ಷಗಳ ಬಳಿಕ ಮೊದಲ ಮಗುವಿನ ಜನನವಾಯಿತು. ಒಸಿಡಿ ಸಮಸ್ಯೆ ಹೊಂದಿದ್ದ ಸುಮನ್​​ರ ಅತಿಯಾದ ಸ್ವಚ್ಛತೆ ವೈವಾಹಿಕ ಜೀವನದಲ್ಲಿ ಸಮಸ್ಯೆಯನ್ನು ತಂದೊಡ್ಡಲು ಆರಂಭಿಸಿತು. ಎಂಬಿಎ ಪದವೀಧರೆಯಾಗಿದ್ದ ಸುಮನ್​​​, ಪತಿ ಆಫೀಸಿನಿಂದ ಬರುತ್ತಿದ್ದಂತೆಯೇ ಬಟ್ಟೆ, ಚಪ್ಪಲಿ ಹಾಗೂ ಮೊಬೈಲ್​ ಸ್ವಚ್ಛ ಮಾಡಲೇಬೇಕೆಂದು ಒತ್ತಾಯಿಸುತ್ತಿದ್ದರು. ಇದರಿಂದ ಅತಿಯಾಗಿ ಕಿರಿಕಿರಿಕೊಂಡ ರಾಹುಲ್​ ಇದೀಗ ವಿಚ್ಛೇದನಕ್ಕೆ ಮುಂದಾಗಿದ್ದಾರೆ.

ಇಂಗ್ಲೆಂಡ್​ನಿಂದ ಮರಳಿದ ದಂಪತಿ ಫ್ಯಾಮಿಲಿ ಕೌನ್ಸೆಲಿಂಗ್​ ಪಡೆದುಕೊಂಡರು. ಬಳಿಕ ಇನ್ನೊಂದು ಮಗುವಿನ ಜನನವಾಯಿತು. ಖುಷಿಯಲ್ಲೇ ಇದ್ದ ಈ ದಂಪತಿ ಕೋವಿಡ್​ 19 ಸಂದರ್ಭದಲ್ಲಿ ಮತ್ತೊಂದು ತಿರುವು ಪಡೆದುಕೊಂಡಿತು. ಒಸಿಡಿ ಸಮಸ್ಯೆ ಮಿತಿಮೀರಿದ ಹಿನ್ನೆಲೆಯಲ್ಲಿ ಸುಮನ್​ ಮನೆಯಲ್ಲಿದ್ದ ಒಂದೊಂದು ವಸ್ತುವನ್ನೂ ತೊಳೆಯಲು ಆರಂಭಿಸಿದ್ರು.

ಲಾಕ್​ಡೌನ್​ ಸಂದರ್ಭದಲ್ಲಿ ಪತಿ ವರ್ಕ್​ ಫ್ರಮ್​ ಹೋಮ್​ ಆರಂಭಿಸಿದ್ದರು. ಈಕೆ ಪತಿಯ ಲ್ಯಾಪ್​ಟಾಪ್​ ಮೊಬೈಲ್​ನೆಲ್ಲ ಡಿಟರ್ಜಂಟ್​ ಹಾಕಿ ತೊಳೆದಿದ್ದಳು. ಅಲ್ಲದೇ ಈಕೆ ದಿನಕ್ಕೆ ಆರಕ್ಕೂ ಹೆಚ್ಚು ಬಾರಿ ಸ್ನಾನ ಮಾಡುತ್ತಿದ್ದಳಂತೆ..!

ಇಷ್ಟಕ್ಕೆ ಮುಗಿಯಲಿಲ್ಲ. ರಾಹುಲ್​ ತಾಯಿ ನಿಧನದ ಬಳಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಮನೆಯನ್ನು ಸಂಪೂರ್ಣವಾಗಿ ಶುದ್ಧಪಡಿಸಬೇಕೆಂದು ಸುಮನ್​ ಪತಿ ಹಾಗೂ ಮಕ್ಕಳನ್ನು ಮೂವತ್ತು ದಿನಗಳ ಕಾಲ ಮನೆಯಿಂದ ಹೊರ ಹಾಕಿದ್ದರಂತೆ.

ಪತ್ನಿಯ ಈ ಗುಣದಿಂದ ಬೇಸತ್ತಿದ್ದ ಪತಿ ತನ್ನ ಮಕ್ಕಳ ಸಮೇತ ಪೋಷಕರ ಮನೆಗೆ ಶಿಫ್ಟ್​ ಆಗಿದ್ದಾರೆ. ಸುಮನ್​​ ಕೂಡಲೇ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಕೌನ್ಸೆಲಿಂಗ್​ ವೇಳೆ ಸುಮನ್ ಗೆ​ ಒಸಿಡಿ ಇದೆ ಎಂದು ತಿಳಿದುಬಂದಿದೆ. ಆದರೆ ಇದನ್ನು ಒಪ್ಪದ ಸುಮನ್​ ತನ್ನ ಪತಿಯೇ ಸರಿ ಇಲ್ಲ ಎಂದು ತಗಾದೆ ತೆಗೆದಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...